ಆರೋಗ್ಯಕ್ಕೆ ನಮ್ಮಲ್ಲಿ ನಮ್ಮ ಸುತ್ತ ಮುತ್ತ ಬೆಳೆಯುವಂಥ, ಆಯಾ ಕಾಲದಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಕಾಶ್ಮೀರದಿಂದ ತರುವ ಸೇಬುಗಿಂತ ನಮ್ಮ ಹಿತ್ತಲಿನಲ್ಲಿ ಬೆಳೆಯುವ ಸೀಬೆಕಾಯಿಯಲ್ಲಿ ಆರೋಗ್ಯಕರ ಗುಣಗಳಿಗೇನು ಕಮ್ಮಿಯಿಲ್ಲ. ಒಂದು ಕಾಲದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಸೀಬೆಕಾಯಿಗೆ ಈಗೆಲ್ಲಾ ಒಂದಕ್ಕೆ 20ರೂ ಹೇಳುತ್ತಿದ್ದಾರೆ, ಆದ್ದರಿಂದ ಬೆಲೆಯಲ್ಲೂ ಸೇಬಿಗಿಂತ ಏನೂ ಕಮ್ಮಿಯಿಲ್ಲ ಬಿಡಿ. ಇದನ್ನು ತಿಂದರೆ ಶೀತ ಅನ್ನುತ್ತಾರೆ, ಆದರೆ ಶೀತಕ್ಕೂ ಇದು ರಾಮಬಾಣ.
ಅದರಲ್ಲೂ ವಿಶೇಷವಾಗಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದರಿಂದ ಪ್ರಯೋಜನ ಹೆಚ್ಚು. ವೈದ್ಯರ ಪ್ರಕಾರ ಸೀಬೇಕಾಯಿ ಅಥವಾ ಹಣ್ಣಿನ ಸಿಪ್ಪೆ ಹೇಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು.
ಮಧುಮೇಹ ಮತ್ತು ಸೀಬೆಕಾಯಿ ಸಿಪ್ಪೆ ನಡುವಿನ ನಂಟು!
- ವೈದ್ಯಕೀಯ ಲೋಕದ ಒಂದು ಅಧ್ಯಯನ ಹೇಳುವ ಹಾಗೆ ಸೀಬೆಕಾಯಿ ಸಿಪ್ಪೆ, ತನ್ನಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ. ಹೀಗಾಗಿ ಹಸಿ ಸೀಬೆಕಾಯಿ ಅಥವಾ ಸೀಬೆಕಾಯಿ ಸಿಪ್ಪೆ ತಿನ್ನುವುದರಿಂದ ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಲಿಪಿಡ್ ಪ್ರೊಫೈಲ್ನಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಸರಿಯಾಗುತ್ತದೆ.
- ಇದರ ಜೊತೆಗೆ ಇನ್ಸುಲಿನ್ ಪ್ರತಿರೋಧತೆ, ರಕ್ತದಲ್ಲಿ ಗ್ಲುಕೋಸ್ ಏರಿಕೆ ಮತ್ತು ಇಳಿಕೆ ಎಲ್ಲವೂ ಸಹ ನಿಯಂತ್ರಣಕ್ಕೆ ಬಂದು ಮಧುಮೇಹದ ತೊಂದರೆ ಅಷ್ಟಾಗಿ ಕಾಡುವುದಿಲ್ಲ. ಹೀಗಾಗಿ ವೈದ್ಯಲೋಕ ಹೇಳುವ ಪ್ರಕಾರ ಯಾರಿಗೆ ಟೈಪ್ 2 ಮಧುಮೇಹ ಇರುತ್ತದೆ ಅಂತಹವರಿಗೆ ಕೇವಲ ಸೀಬೆ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
- ಸೀಬೆಕಾಯಿ ಸಿಪ್ಪೆಯಲ್ಲಿ ಸಿಗುವ ಇತರ ಪ್ರಯೋಜನಗಳು
- ಅಷ್ಟೇ ಅಲ್ಲದೆ ಸೀಬೆಕಾಯಿ ಸಿಪ್ಪೆಯಲ್ಲಿ ನಿಮ್ಮ ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಮಟ್ಟ, ಎಲ್ಡಿಎಲ್ ಕೊಲೆಸ್ಟರಾಲ್, ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಎಲ್ಲವನ್ನು ಒಂದು ನಿಯಂತ್ರಣಕ್ಕೆ ತಂದು ಹೃದಯ ರಕ್ತನಾಳದ ಕಾಯಿಲೆ ಬರದಂತೆ ನೋಡಿಕೊಳ್ಳುವ ಗುಣವಿದೆ.
- ದೇಹದಲ್ಲಿ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಅಂಶ ಸ್ವಲ್ಪ ಹೆಚ್ಚಾದರೆ ಅದರ ಕಾರಣದಿಂದ ಕೆಟ್ಟ ಕೊಲೆಸ್ಟ್ರಾಲ್ ಎಂದು ಗುರುತಿಸಿಕೊಂಡ ಎಲ್ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಕ್ರಮೇಣವಾಗಿ ಹೃದಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.
ಅಧ್ಯಯನಗಳು ಹೇಳುವಂತೆ
- ಅಧ್ಯಯನಗಳು ಹೇಳುವಂತೆ ಸೀಬೆ ಹಣ್ಣಿನ ಸಿಪ್ಪೆ ಸೇವನೆ ಮಾಡುವುದರಿಂದ ದೇಹದಲ್ಲಿ Alkaline Phosphatase,ಸೀರಮ್ ಕ್ರಿಯೇಟಿನೈನ್ ಅಂಶಗಳು ಸಹ ಕಡಿಮೆಯಾಗುತ್ತದೆ ಮತ್ತು ಪ್ರಮಾಣವಾಗಿ ಲಿವರ್ ಭಾಗದ ಕಾರ್ಯಚಟುವಟಿಕೆ ಅತ್ಯುತ್ತಮವಾಗುತ್ತದೆ.
- ಹೀಗಾಗಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ತ್ವಚೆಯ ಆರೋಗ್ಯಕ್ಕಾಗಿ ಸೀಬೆ ಹಣ್ಣು ಅಥವಾ ಅದರ ಸಿಪ್ಪೆಯನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು.
ಕೊನೆಯ ಮಾತು
ಆದರೆ ಒಂದು ಅಂಶ ನೆನಪಿರಲಿ. ಅದೇನೆಂದರೆ ಸೀಬೆಕಾಯಿ ಮೇಲ್ಭಾಗದಲ್ಲಿ ರಾಸಾಯನಿಕ ಅಂಶಗಳು ಮತ್ತು ಮೇಣ ಇರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಅದನ್ನು ಸಂಪೂರ್ಣವಾಗಿ ಕತ್ತರಿಸಿ ಬಿಸಾಕುವ ಬದಲು ಚೆನ್ನಾಗಿ ನೀರಿನಲ್ಲಿ ತೊಳೆದು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.