ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಿವಿಗಳಿಗೆ ಇಯರ್ ಬಡ್ಸ್ ಗಳನ್ನ ಹಾಕಿಕೊಂಡಿರುತ್ತಾರೆ. ವೈರ್ ಇಯರ್ ಫೋನ್ ಬಳಿಕ ಬ್ಲೂಟೂತ್ ನೆಕ್ ಬ್ಯಾಂಡ್ ಮಾರುಕಟ್ಟೆಗೆ ಬಂದಿದ್ದು ಇವುಗಳನ್ನು ಧರಿಸಲು ಸುಲಭವಾದ ಕಾರಣ ಹೆಚ್ಚಿನವರು ಇವುಗಳ ಮೊರೆ ಹೋಗ್ತಿದ್ದಾರೆ. ಆದರೆ ಇದರಿಂದ ಕಿವಿಗಳಿಗೆ ಹಾಕಿಯೇ ಹೆಚ್ಚು. ಅಂತೆಯೇ ಯುವತಿಯೊಬ್ಬಳು ಇಯರ್ ಬಡ್ನಲ್ಲಿ ಹಾಡು ಕೇಳುತ್ತಿರುವಾಗಲೇ ಕಿವಿಯಲ್ಲಿಯೇ ಸ್ಫೋಟಗೊಂಡ ಘಟನೆ ನಡೆದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ FE ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡಿದೆ. ಟರ್ಕಿ ಮೂಲದ ವ್ಯಕ್ತಿ ಈ ಘಟನೆಯನ್ನು ಹಂಚಿಕೊಂಡಿದ್ದು, ಸ್ಫೋಟದಿಂದಾಗಿ ಯುವತಿ ಸಂಪೂರ್ಣವಾಗಿ ಕೇಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾಳೆ.
ಯುವತಿ ಗ್ಯಾಲಕ್ಸಿ ಎಸ್23 ಅಲ್ಟ್ರಾ ಸ್ಮಾರ್ಟ್ಫೋನ್ನೊಂದಿಗೆ ಬಳಸಲು ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ FE ಖರೀದಿಸುತ್ತಾಳೆ. ಇಯರ್ ಬಡ್ 36%ಚಾರ್ಜ್ನಲ್ಲಿತ್ತು. ಅದನ್ನು ಕಂಡು ಸ್ನೇಹಿತೆ ಬಳಿಯಿಂದ ಚಾರ್ಜ್ ಮಾಡದೆ ಇರುವ ಇಯರ್ಬಡ್ ತೆಗೆದುಕೊಳ್ಳುತ್ತಾಳೆ ಬಳಿಕ ಬಳಕೆ ಮಾಡುತ್ತಾಳೆ.
ದುರಾದೃಷ್ಟಕರ ಸಂಗತಿ ಎಂದರೆ ಯುವತಿ ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ FE ಇಯರ್ ಬಡ್ಸ್ ಕಿವಿಯಲ್ಲಿ ಇರಿಸಿದ್ದಾಗ ಸ್ಫೋಟಗೊಂಡಿದೆ. ಇದರಿಂದ ಯುವತಿ ಶಾಶ್ವತ ಶ್ರವಣ ನಷ್ಟ ಅನುಭವಿಸುತ್ತಿದ್ದಾಳೆ. ಸದ್ಯ ಸ್ಫೋಟಗೊಂಡ ಇಯರ್ ಬಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆಯ ಬಳಿಕ ಯುವತಿಯ ಕಡೆಯವರು ಸ್ಥಳೀಯ ಸ್ಯಾಮ್ಸಂಗ್ ಮಳಿಗೆಯನ್ನು ಸಂಪರ್ಕಿಸಿದರು. ಸ್ಫೋಟಗೊಂಡ ಇಯರ್ಬಡ್ ಅನ್ನು ತೋರಿಸಿದರು. ಇದನ್ನು ಕಂಡೊಡನೆ ಅಚ್ಚರಿಗೊಂಡರು. ಜೊತೆಗೆ ಕ್ಷಮೆಯಾಚಿಸಿದರು. ಬಳಿಕ ಹೊಸ ಇಯರ್ಬಡ್ಸ್ ಕೊಟ್ಟರು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.