ಬೆಂಗಳೂರು:- ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಡಿವಿ ಸದಾನಂದಗೌಡ ಕಾರಣ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 8 ಕಡೆ ಬಿಜೆಪಿ ಸೋಲಿಗೆ ಹಾಗೂ ಉಳಿದೆಡೆ ಕಡಿಮೆ ಮಾರ್ಜಿನ್ ಬರಲು ಪ್ರಧಾನಿ ಮೋದಿಯವರ ಮೇಲಿನ ನಮ್ಮ ಅತಿಯಾದ ಆತ್ಮ ವಿಶ್ವಾಸ ಹಾಗೂ ಕಾರ್ಯಕರ್ತರ ಕಡಗಣನೆಯೇ ಕಾರಣ ಎಂದರು.
Murder Case: ರೇಣುಕಾಸ್ವಾಮಿ ಕೊಲೆ ಕೇಸ್.. ದರ್ಶನ್ ಬಗ್ಗೆ ಸುಮಲತಾ ಹೇಳಿದ್ದೇನು!?
ಈ ಲೋಕಸಭಾ ಚುನಾವಣೆಯಲ್ಲೂ ನಮಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ನಾವು ವಿಧಾನಸಭಾ ಫಲಿತಾಂಶದ ಹಿನ್ನೆಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಉತ್ತೇಜಿಸಿ ಚುನಾವಣೆ ಮಾಡುವ ಕೆಲಸ ಆಗಲಿಲ್ಲ. ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸ ಬಿಜೆಪಿ 8 ಸೀಟ್ ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪವರ್ಫುಲ್ ಆಗಿ ಕಾರ್ಯಾಚರಣೆಗೆ ಇಳಿದಿದೆ ಎಂಬುದನ್ನು ಊಹಿಸಲು ನಮ್ಮ ರಾಜ್ಯದ ಸಂಘಟನೆ ವಿಫಲವಾಯಿತು. ಜೆಡಿಎಸ್ ಜೊತೆಗಿದ್ದ ಕಾರಣಕ್ಕೆ ಹಳೇ ಮೈಸೂರು ಕಡೆ ನಮಗೆ ಗೆಲುವಾಗಿದೆ ಎಂದು ಜನ ಮಾತಾಡಲು ಆರಂಭಿಸಿದ್ದು ಬಿಜೆಪಿಗೆ ಸವಾಲಾಗಿದೆ. ಎಲ್ಲಾ ಕಡೆ ಮಾರ್ಜಿನ್ ಕಡಿಮೆ ಆಗಿರುವುದು ಎಚ್ಚರಿಕೆಯ ಸಂದೇಶ ಎಂದು ಅವರು ಹೇಳಿದ್ದಾರೆ.
ಸೋಲಿಗೆ ಯಾರು ಹೊಣೆ ಎಂಬ ಪ್ರಶ್ನೆಗೆ, ಕೊಹ್ಲಿ ಬ್ಯಾಟಿಂಗ್ ಮಾಡಿದರೂ ಕಪ್ ಸ್ಪೀಕಾರ ಮಾಡಿದ್ದು ರೋಹಿತ್ ಶರ್ಮಾ. ಚಾರ್ಜ್ಶೀಟ್ ಎಲ್ಲಿ ಹೋಗಬೇಕೋ ಅಲ್ಲಿ ಹೋಗುತ್ತದೆ. ನಾವೆಲ್ಲಾ ಎ3, ಎ4 ಎಲ್ಲಾ ಆಗಬಹುದು ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ಗೆ (R.Ashok) ಅಧ್ಯಯನದ ಕೊರತೆ ಇದೆ. ಸದನಕ್ಕೆ ಅಧ್ಯಯನ ಮಾಡಿ ಬರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ವಿಪಕ್ಷ ನಾಯಕ ಸ್ಥಾನ ಬದಲಾವಣೆ ಚರ್ಚೆ ಪಕ್ಷದಲ್ಲಿ ಕೇಳಿ ಬರುತ್ತಿರುವ ವಿಚಾರವಾಗಿ, ಅಶೋಕ್ ಹಿಂದಿನಿಂದಲೂ ಆಡಳಿತದಲ್ಲೇ ಇದ್ದರು. ಹಾಗಾಗಿ ಅವರ ಮನಸ್ಥಿತಿ ಆಡಳಿತದ ಕಡೆಯೇ ಇದೆ. ವಿಪಕ್ಷ ನಾಯಕ ಅಧ್ಯಯನ ಮಾಡಬೇಕು. ಅಂಕಿ ಅಂಶಗಳ ಬಗ್ಗೆ ಮಾಹಿತಿ ಇರಬೇಕು. ವಿಪಕ್ಷ ನಾಯಕ ಅಂದರೆ ಬರಿ ಜಗಳ ಮಾಡುವುದಲ್ಲ. ಭಾರೀ ಅಧ್ಯಯನದ ಅಗತ್ಯ ಇದೆ. ಬರೀ ಓಡಾಟದಿಂದ ಪಕ್ಷದ ನಾಯಕನಾಗಿ ಬೆಳವಣಿಗೆ ಆಗಬಹುದು, ವಿಪಕ್ಷ ನಾಯಕನಾಗಿ ಬೆಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.