ಗದಗ: ರಾಮನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ದೇಶದೆಲ್ಲೆಡೆ ಇರುವ ರಾಮನ ಕುರುಹುಗಳು ಕಾಣಸಿಗ್ತಾಯಿವೆ.
ಅಂತೆಯೇ ಗದಗ ಜಿಲ್ಲೆ ಗದಗ ತಾಲೂಕಿನ ಬೆಳಧಡಿ ಗ್ರಾಮಕ್ಕೂ ಸೀತೆ ವನವಾಸದಲ್ಲಿದ್ದ ಸಂದರ್ಭದಲ್ಲಿ ರಾಮ ಲಕ್ಷ್ಮಣರಿಬ್ಬರೂ ಒಂದು ದಿನ ಇಲ್ಲಿ ತಂಗಿದ್ರು ಅನ್ನುವ ಐತಿಹ್ಯವಿದೆ.
ಸೀತಾನ್ವೇಷಣೆ ಸಂದರ್ಭದಲ್ಲಿ ಒಂದು ದಿನ ಕಾಲ ನಮ್ಮೂರಲ್ಲಿ ಶ್ರೀರಾಮನಿದ್ದ ಅನ್ನೋ ಕಾರಣಕ್ಕೆ ಈ ಊರಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರವನ್ನ ನಿರ್ಮಿಸಲಾಗಿದ್ದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿವಸ ಇಲ್ಲಿಯೂ ಸಹ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.