ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಆದರೆ ಯಾವಾಗ, ಯಾವ ಸಿನಿಮಾ ಎಂದು ಸ್ಪಷ್ಟನೆ ಸಿಕ್ಕಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದ್ದು ದುನಿಯಾ ವಿಜಯ್ ನಟನೆಯ 29ನೇ ಸಿನಿಮಾದಲ್ಲಿ ಮೋನಿಕಾ ನಟಿಸುತ್ತಿದ್ದಾರೆ.
ಇಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಚಿತ್ರಕ್ಕೆ ಕೆ.ವಿ ಸತ್ಯಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ಮೋನಿಕಾ ವಿಜಯ್, ಶಿಶಿರ್ ಮುಂತಾದವರು ಭಾಗಿಯಾಗಲಿದ್ದಾರೆ.
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ಹೊಸ ಚಿತ್ರದಲ್ಲಿ ವಿಜಯ್ ಪುತ್ರಿ ಮೋನಿಕಾಗೂ ಉತ್ತಮ ಪಾತ್ರವಿದೆ. ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಮೋನಿಕಾ ಎಂಟ್ರಿಕೊಡ್ತಿದ್ದು ಭರವಸೆ ಮೂಡಿಸಿದ್ದಾರೆ.
ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ಬರುತ್ತಿದ್ದಾರೆ.