ಕನಕಪುರ:- ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಸರ್ಕಾರ ಕಟ್ಟಿಹಾಕಲು ನಾನೇ ಹಗ್ಗ ಕಳಿಸಿಕೊಡುವೆ ಎಂದು DCM ಡಿಕೆಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಮ್ಮಲ್ಲಿ ಒಳ್ಳೆ ತೆಂಗಿನ ನಾರಿನ ಹಗ್ಗ ಸಿಗುತ್ತದೆ. ಬೇಕಾದರೆ ವಿಪಕ್ಷಗಳಿಗೆ ಕಳುಹಿಸಿಕೊಡುತ್ತೇನೆ. ಅದರಲ್ಲಿ ನಮ್ಮನ್ನು ಕಟ್ಟಿ ಹಾಕಲಿ ಎಂದರು.
ನಮ್ ಮನೆಯವ್ರಿಗೆ ಮತ್ತು ಕ್ಷೇತ್ರದ ಜನರಿಗೆ ಟೈಮ್ ಕೊಡಲು ಆಗುತ್ತಿಲ್ಲ. ಅಷ್ಟೊಂದು ಕೆಲಸದ ಒತ್ತಡ ಇದೆ. ಈಗ ಅಧಿವೇಶನಕ್ಕೆ ಬೆಳಗಾವಿಗೆ 10 ದಿನ ಹೋಗುತ್ತೇವೆ. ಅದರ ಜೊತೆಗೆ ರಾಜಕೀಯ ಜಂಜಾಟ ಬೇರೆ ಇದೆ. ಕ್ಷೇತ್ರದಲ್ಲಿನ ಕೆಲ ಕೆಲಸಗಳ ಪ್ರಗತಿ ಬಗ್ಗೆ ಸಂಸದ ಡಿ.ಕೆ.ಸುರೇಶ್ ನಿಗಾ ವಹಿಸಿದ್ದಾರೆ ಎಂದರು.