ಚಿಕ್ಕಬಳ್ಳಾಪುರ : ಜಿಲ್ಲೆಯ ಚೇಳೂರು ತಾಲ್ಲೂಕಿನ ಚಾಕವೇಲು ಗ್ರಾಮದ ಮುಖ್ಯರಸ್ತೆ ವೃತ್ತದಲ್ಲಿ ಕೆಟ್ಟು ನಿಂತಿರುವ ಹೈಮಾಸ್ಕ್ ಲೈಟ್ ರಿಪೇರಿ ಮಾಡಲು ಹೋಗಿದ್ದ ಕಾರ್ಮಿಕ 240 ವೋಲ್ಟ್ ವಿದ್ಯುತ್ ತಂತಿ ಮೇಲೆ ಪ್ರಜ್ಞೆ ತಪ್ಪಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಚಾಕವೇಲು ಗ್ರಾಮ ಪಂಚಾಯತಿ ವತಿಯಿಂದ ವಿದ್ಯುತ್ ಬಲ್ಫ್ ಗಳು ರಿಪೇರಿ ಮಾಡಲು ಗುತ್ತಿಗೆದಾರರಾದ ಶಮೀರ್ ಗೆ ಗುತ್ತಿಗೆ ನೀಡಿದ್ದು,
ಗುತ್ತಿಗೆ ದಾರರು ಹೈಮಾಸ್ಕ್ ಲೇಟ್ ರಿಪೇರಿ ಮಾಡಿದ ನಂತರ ವಿದ್ಯುತ್ ಸಂಪರ್ಕವನ್ನು ಮಾಡಲು ಚಾಕವೇಲು ಗ್ರಾಮದ ಉಮಾಶಂಕರ್ ನನ್ನು ಬಳಸಿಕೊಂಡು ವಿದ್ಯುತ್ ಕಂಬವನ್ನು ಹತ್ತಿ ತಂತಿ ಸಂಪರ್ಕ ನೀಡಲು ಸೂಚಿಸಿದ್ದು,ಉಮಾಶಂಕರ್ ತಂತಿ ಸಂಪರ್ಕ ಕೊಡಲು ಹೋಗಿ ಗ್ರಾಮದಲ್ಲಿ ಹಾದುಹೋಗಿರುವ 240 ವೋಲ್ಟ್ ತಂತಿಯನ್ನು ಮುಟ್ಟಿ ಪ್ರಜ್ಞೆ ತಪ್ಪಿ ತಂತಿ ಮೇಲೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ನೋಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ತಕ್ಷಣ ಚಾಕವೇಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ನಂತರ ಬಾಗೇಪಲ್ಲಿ ಆಸ್ಪತ್ರೆಗೆ ಕರೆದೋಯ್ಯಲಾಗಿ ಆಸ್ಪತ್ರೆಯಲ್ಲಿ,
Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ ಗೊತ್ತಾ: ಇಲ್ಲಿದೆ ಟಿಪ್ಸ್!
ಚಿಕಿತ್ಸೆ ಪಡೆದು ಪ್ರಾಣಕ್ಕೆ ಯಾವುದೇ ಅಪಾಯವಿ ಎಂದು ಗಾಯಗೊಂಡ ಉಮಾಶಂಕರ್ ಸ್ವತಃ ಹೇಳಿರುತ್ತಾರೆ. ಚಾಕವೇಲು ಪಂಚಾಯತಿಯ ಅಬುಬಕರ್ ಸಿದ್ದೀಕ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಘಟನೆಗೆ ಮುಖ್ಯ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಯಾವುದೇ ವಿದ್ಯುತ್ ಸಂಪರ್ಕವನ್ನು ಕಡಿತಮಾಡದೆನೆ ಹಾಗೇಯೆ ಉಮಾಶಂಕರನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿದ್ದಾರೆಂದು ಗ್ರಾಮಸ್ಥರಿಂದ ತಿಳಿದು ಬಂದಿದೆ.