ಕಲಬುರಗಿ: ಬೆಳ್ಳಂ ಬೆಳಿಗ್ಗೆಯೇ ರಸ್ತೆಗಿಳಿದು ವಿಧ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಅಫಜಲಪುರದ ಆತನೂರಿನಲ್ಲಿ ಪ್ರತಿಭಟನೆ ನಡೆದಿದ್ದು ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ವಿಧ್ಯಾರ್ಥಿಗಳು ಪ್ರೋಟೆಸ್ಟ್ ಮಾಡಿದ್ದಾರೆ.
ಆದರ್ಶ ಮಹಾವಿದ್ಯಾಲಯದ ವಿಧ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆ ವಿರುದ್ಧ ಕಿಡಿ ಕಾರಿದ್ದಾರೆ.
ಅತನೂರ್ ಮಾರ್ಗದಲ್ಲಿ ಬಸ್ ನಿಲ್ಲಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.