ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚುವ ಮೂಲಕ ಸಿಎಸ್ ಕೆ ಆಲ್ ರೌಂಡರ್ ಶಿವಂ ದುಬೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಖ್ಯಾತ ಕ್ರಿಕೆಟ್ ವಿವರಣೆಕಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚುವ ಮೂಲಕ ಸಿಎಸ್ ಕೆ ಆಲ್ ರೌಂಡರ್ ಶಿವಂ ದುಬೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಖ್ಯಾತ ಕ್ರಿಕೆಟ್ ವಿವರಣೆಕಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
“ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಶಿವಂ ದುಬೆಗೆ ಐಪಿಎಲ್ ಟೂರ್ನಿ ಉತ್ತಮ ಅವಕಾಶವಾಗಿದೆ ಎಂಬುದು ನನ್ನ ಭಾವನೆ. ಆತ ಮೊದಲು ಟೀಮ್ ಇಂಡಿಯಾ ಪರ ಚುಟುಕು ಕ್ರಿಕೆಟ್ ನಲ್ಲಿ ರನ್ ಗಳಿಸಿದ್ದಾನೆ. ನಂತರ ರಣಜಿ ಟ್ರೋಫಿ ಟೂರ್ನಿಯಲ್ಲೂ ಗಮನ ಸೆಳೆದಿದ್ದಾರೆ. ಅಲ್ಲದೆ ವಿಕೆಟ್ ಪಡೆದು ಮಿಂಚಿದ್ದಾನೆ. ಆದ್ದರಿಂದ ಆತನಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ದೊಡ್ಡ ಅವಕಾಶವಿದೆ,” ಎಂದು ಹೇಳಿದ್ದಾರೆ.
ಅಫಘಾನಿಸ್ತಾನ ಸರಣಿಯಲ್ಲಿ ಮಿಂಚಿದ ನಂತರ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಅದ್ಭುತ ಪ್ರದರ್ಶನ ತೋರಿದ ಶಿವಂ ದುಬೆ, 5 ಪಂದ್ಯಗಳಿಂದ ಎರಡು ಶತಕ ಸೇರಿದಂತೆ 366 ರನ್ ಗಳಿಸಿದ್ದಲ್ಲದೆ, 6 ವಿಕೆಟ್ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯಿಂದ ಉಳಿದ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ.