ಒಣ ಶುಂಠಿ ಎಂದಾಕ್ಷಣ ಅದು ಏನಕ್ಕೂ ಬರಲ್ಲ ಎಂಬ ಭಾವನೆ ಬಂದಿರುತ್ತೆ. ಆದರೆ ಒಣ ಶುಂಠಿಯು ಹಸಿ ಶುಂಠಿಯಷ್ಟೇ ಪ್ರಾಮುಖ್ಯೆತಯೆನ್ನು ಪಡೆದಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಮಲಬದ್ಧತೆಯ ಸಮಸ್ಯೆಯ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಣ ಶುಂಠಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ದೇಹದ ಆರೋಗ್ಯ ಹೆಚ್ಚುವುದನ್ನು ನೀವೇ ಸುಲಭವಾಗಿ ಕಂಡುಕೊಳ್ಳಬಹುರು
ತೂಕ ಇಳಿಸಲು ಸಹಾಯ: ಒಣ ಶುಂಠಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಣ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಹೊಟ್ಟೆ ನೋವು ನಿವಾರಣೆ: ಒಣ ಶುಂಠಿಯ ಬಳಕೆಯು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹಾಗೂ ದೇಹದ ನೋವನ್ನು ಶಮನ ಮಾಡುತ್ತದೆ. ಇದಲ್ಲದೆ ಒಣ ಶುಂಠಿಯ ಸೇವನೆಯು ಹೊಟ್ಟೆಯನ್ನು ಶುದ್ಧೀಕರಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಜೀರ್ಣಶಕ್ತಿ ಬಲವಾಗಿಸುತ್ತೆ: ಒಣ ಶುಂಠಿಯ ಪುಡಿ ದೀರ್ಘಕಾಲದ ಅಜೀರ್ಣದಿಂದಾಗಿ ಹೊಟ್ಟೆ ನೋವು ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಒಣ ಶುಂಠಿಯ ಪುಡಿ ಈ ಸಮಸ್ಯೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಅಧಿಕಗೊಳಿಸುತ್ತದೆ.
ಕೊಲೆಸ್ಟ್ರಾಲ್ ಕಡಿಮೆ: ಶುಂಠಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಮಟ್ಟದ ಎಲ್ಡಿಎಲ್ ಲಿಪೊಪ್ರೋಟೀನ್ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಒಣ ಶುಂಠಿ ಸೇವಿಸಿದರೆ ನಿಮ್ಮ ಸಮಸ್ಯೆಯಿಂದ ದೂರವಾಗಬಹುದು.
ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ: ಒಣ ಶುಂಠಿ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೆಮ್ಮು, ಶೀತ ಮತ್ತು ಗಂಟಲು ನೋವನ್ನು ನಿವಾರಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಉರಿಯೂತದ ಗುಣಲಕ್ಷಣಗಳು: ಇದು ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ, ಸ್ನಾಯು ಮತ್ತು ಕೀಲು ನೋವನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.