ಬೆಂಗಳೂರು:- ಬಿಯರ್ ಪ್ರಿಯರು ಸರ್ಕಾರಕ್ಕೆ ಶಾಕ್ ಕೊಡುವುದಕ್ಕೆ ಮುಂದಾಗಿದ್ದಾರೆ.
ಕರ್ನಾಟಕ ಸರ್ಕಾರದ ಖಜಾನೆಗೆ ಆದಾಯ ಹರಿದು ಬರುವ ಪ್ರಮುಖ ಆದಾಯ ಮೂಲಗಳಲ್ಲಿ ಅಬಕಾರಿ ಇಲಾಖೆ ಸಹ ಒಂದು. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೇಳಿಕೊಳ್ಳುವ ಆದಾಯ ಬರುತ್ತಿಲ್ಲ. 2024ನೇ ಸಾಲಿನ ಜೂನ್ – ಜುಲೈ ತಿಂಗಳಿನಿಂದ ಬಿಯರ್ ಡಿಮ್ಯಾಂಡ್ ಭರ್ಜರಿ ಇಳಿಕೆಯಾಗಿದ್ದು.
ಮದ್ಯ ಮಾರಾಟದ ಆದಾಯ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್ ಆಗಿದೆ. ಅದರಲ್ಲೂ ಈ ಅವಧಿಯಿಂದ ಬಿಯರ್ ಮಾರಾಟ ಕಡಿಮೆಯಾಗುತ್ತಲ್ಲೇ ಇದೆ. ಮದ್ಯ ಮಾರಾಟದಲ್ಲಿ ಬಿಯರ್ ಸಹ ಪ್ರಮುಖವಾಗಿದೆ. ಕೆಲವು ಯುವಕರು ಹಾಗೂ ಮದ್ಯ ವಯಸ್ಕರು ಬಿಯರ್ ಕುಡಿಯುವುದು ಹೆಚ್ಚು. ಆದರೆ ಕಳೆದ ಮೇ ನಂತರ ಜನ ಹೆಚ್ಚು ಬಿಯರ್ ಮುಟ್ಟುತ್ತಿಲ್ಲವಂತೆ.
ಮೂರು ಬಾರಿ ಬಿಯರ್ ಬೆಲೆ ಏರಿಕೆ: ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ಒಂದು ವರ್ಷದ ಅವಧಿಯಲ್ಲೇ ವಿವಿಧ ಕಾರಣಕ್ಕೆ ಮೂರು ಬಾರಿ ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಇದು ಬಿಯರ್ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿತ್ತು. 2025ನೇ ಸಾಲಿನ ಜನವರಿ 20ರಿಂದ ಸಹ ಶೇ 15 -55 ರಷ್ಟು ವಿವಿಧ ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಳವಾಗಿತ್ತು. ಪ್ರತಿ ತಿಂಗಳು 35ರಿಂದ 40 ಲಕ್ಷದಷ್ಟು ಬಿಯರ್ ಬಾಕ್ಸ್ ಮಾರಾಟವಾಗುತ್ತಿದ್ದವು. ಆದರೆ ಇದರಲ್ಲಿ ಶೇ 10ರಿಂದ 18 ರಷ್ಟು ಬಿಯರ್ ಮಾರಾಟ ಕುಸಿತವಾಗಿದೆ ಎಂದು ಅಂದಾಜಿಸಲಾಗಿದೆ.
ಬೇಸಿಗೆ ಕಾಲದಲ್ಲಿ ಬಿಯರ್ ಭರ್ಜರಿ ಮಾರಾಟವಾಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದಕ್ಕೆ, ಬಿಸಿಲಿನಿಂದ ಸುಸ್ತಾಗಿ ಸಣ್ಣ ಬ್ರೇಕ್ ಅಂತಲೂ ಜನ ಬಿಯರ್ ಕುಡಿಯುವುದು ಇದೆ. ಆದರೆ, ಅದೇ ಚಳಿಗಾಲದಲ್ಲಿ ಬಿಯರ್ ಮಾರಾಟ ಸಾಮಾನ್ಯವಾಗಿಯೇ ಕಡಿಮೆ ಇರುತ್ತೆ. ಆದರೆ 2024 -25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಉಳಿದ ವರ್ಷಗಳಿಗಿಂತ ಬಿಯರ್ ಸೇಲ್ ಸಿಕ್ಕಾಪಟ್ಟೆ ಡೌನ್ ಆಗಿದೆ ಅಂತ ಹೇಳಲಾಗುತ್ತಿದೆ.
ಇನ್ನು ಮುಖ್ಯವಾಗಿ ನಿರಂತರವಾಗಿ ಬಿಯರ್ ಮಾರಾಟದ ಬೆಲೆಯನ್ನು ಸರ್ಕಾರ ಹೆಚ್ಚಿಸಿಕೊಂಡು ಬಂದಿರುವುದು ಸಹ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ.