ಅದು ಸಿಲಿಕಾನ್ ಸಿಟಿ ಔಟ್ ಸ್ಕಟ್ಸ್ ನಲ್ಲಿರುವ ಐಟಿ ಬಿಟಿ ಕ್ಷೇತ್ರ ಪಕ್ಕದ ಪ್ರತಿಷ್ಠಿತ ಬಡಾವಣೆ. ಅಲ್ಲಿನ ಜನರು ಇಷ್ಟು ದಿನ ನೆಮ್ಮದಿಯಾಗೆ ಕೆಲಸ ಕಾರ್ಯಗಳನ್ನ ಮಾಡಿಕೊಳ್ತಿದ್ರು. ಆದ್ರೆ ಇತ್ತೀಚೆಗೆ ಆ ಏರಿಯಾಗೆ ಬಂದ ಅದೊಂದು ಮಳಿಗೆ ಏರಿಯಾ ಸೇರಿದಂತೆ ವಿಲ್ಲಾ ನಿವಾಸಿಗಳ ನಿದ್ದೆಗೆಡಿಸಿದ್ದು ಮಳಿಗೆ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ..
ಪ್ರತಿಷ್ಠಿತ ವಿಲ್ಲಾಗಳ ಮುಂದೆಯೆ ಖಾಲಿ ಜಾಗವಿದ್ದು, ಜಾಗವನ್ನೆಲ್ಲ ವಿಲ್ಲಾ ನಿವಾಸಿಗಳೆ ಸ್ವಚ್ಚ ಮಾಡಿಸಿ ಹಗ್ಗ ಕಟ್ಟಿ ಬಂದೋಬಸ್ತ್ ಮಾಡ್ತಿದ್ದಾರೆ. ಇನ್ನು ಇಷ್ಟು ಮಾತ್ರವಲ್ಲದೆ ಹಗ್ಗ ಕಟ್ಟಿದ ಜಾಗದಲ್ಲೆ ನಿಂತು ಸ್ಥಳಿಯ ನಿವಾಸಿಗಳ ಜೊತೆಗೂಡಿ ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದು, ಕುಡುಕರ ಹಾವಳಿಯಿಂದ ಸ್ಥಳೀಯರು ನಿದ್ದೆಗೆಡುವಂತಾಗಿದೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ಗುಂಪುಗೂಡಿ ದಿಕ್ಕಾರಗಳನ್ನ ಕೂಗಿ ಆಕ್ರೋಶ ಹೊರ ಹಾಕ್ತಿರುವ ಇವರೆಲ್ಲ ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗ್ರಾಮದ ಮಿಮ್ಸ್ ವಿಲ್ಲಾಗಳ ನಿವಾಸಿಗಳು ಹಾಗೂ ಗ್ರಾಮಸ್ಥರು.
ಕಳೆದ ಹಲವು ವರ್ಷಗಳಿಂದ ಪ್ರತಿಷ್ಟಿತ ವಿಲ್ಲಾಗಳನ್ನ ಖರೀದಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಇವರಿಗೆ ಕಳೆದ ಕೆಲ ತಿಂಗಳುಗಳಿಂದ ನೆಮ್ಮದಿಯಿಲ್ಲದಂತಾಗಿದೆಯಂತೆ. ವಿಲ್ಲಾಗಳ ಮುಂದೆಯೆ ಇರುವ ಅಂಗಡಿಯೊಂದರಲ್ಲಿ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್ ಗೆ ಸರ್ಕಾರ ಅನುಮತಿ ನೀಡಿದ್ದು ಬಾರ್ ಅನ್ನ ಒಪನ್ ಮಾಡಿದ್ದಾರೆ.
Chanakya Niti: ಜೀವನದಲ್ಲಿ ಬೇಗ ಯಶಸ್ವಿ ಆಗಬೇಕಂದ್ರೆ ಚಾಣಕ್ಯ ಹೇಳಿದ ಈ ಮಾತುಗಳನ್ನು ಅನುಸರಿಸಿ.!
ಹೀಗಾಗಿ ಮಧ್ಯಾಹ್ನದಿಂದಲೆ ಬಾರ್ಗೆ ಬರುವ ಕುಡುಕರು ಬಾಟಲ್ಗಳನ್ನ ತೆಗೆದುಕೊಂಡು ಬಂದು ವಿಲ್ಲಾ ಮುಂಬಾದ ಖಾಲಿ ಜಾಗದಲ್ಲೆ ಪಾರ್ಟಿ ಮಾಡ್ತಿದ್ದಾರಂತೆ. ಅಲ್ಲದೆ ಪಾರ್ಟಿ ಮಾಡಿ ಅಲ್ಲೆ ಕಂಠಪೂರ್ತಿ ಕುಡಿದು ಬಿದ್ದೋಗುತ್ತಿದ್ದು ವಾಹನಗಳು ಒಡಾಡುವುದಕ್ಕೂ ಸಾಧ್ಯವಾಗ್ತಿಲ್ಲ ನಮಗೆ ನೆಮ್ಮದಿಯಿಲ್ಲದಂತಾಗಿದೆ ಅಂತ ಸ್ಥಳಿಯರು ಬಾರ್ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗ್ಗೆ 10 ಗಂಟೆಗೆ ಒಪನ್ ಆಗುವ ಬಾರ್ ರಾತ್ರಿ 11 ಗಂಟೆವರೆಗೂ ಒಪನ್ ಇರಲಿದ್ದು ಖಾಲಿ ಜಾಗದಲ್ಲೆ ಕುಡುಕರು ಠೀಕಾಣಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ತಾರಂತೆ. ಅಲ್ಲದೆ ಈ ಬಗ್ಗೆ ಕೇಳಲು ಹೋದ್ರೆ ಸೆಕ್ಯೂರಿಟಿ ಗಾರ್ಡಗಳು ಸೇರಿದಂತೆ ನಿವಾಸಿಗಳ ಮೇಲೆ ಗಲಾಟೆಗೆ ಹೋಗ್ತಿದ್ದು ನಮಗೆ ನೆಮ್ಮದಿಯಿಲ್ಲದಂತಾಗಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಈ ಬಗ್ಗೆ ಈ ಹಿಂದೆ ದೂರು ನೀಡಿದಾಗ ಕೆಲ ದಿನಗಳ ಕಾಲ ಸ್ಥಗಿತವಾಗಿದ್ದ ಬಾರ್ ಇದೀಗ ಮತ್ತೆ ಒಪನ್ ಆಗಿ ಅದೇ ಕ್ವಾಟ್ಲೆ ನೀಡ್ತಿದ್ದು ಮನೆ ದೇವಸ್ಥಾನ ಹಾಗೂ ಶಾಲೆಗಳು ಇರುವ ಜಾಗದಲ್ಲಿ ಬಾರ್ಗೆ ಅನುಮತಿ ನೀಡಿದ್ದಾದ್ರು ಹೇಗೆ ಅಂತ ಪ್ರಶ್ನಿಸಿದ್ದಾರೆ.
ಒಟ್ಟಾರೆ ಕೋಟಿ ಕೋಟಿ ಹಣ ಸುರಿದು ಪ್ರತಿಷ್ಟಿತ ವಿಲ್ಲಾಗಳನ್ನ ಖರೀದಿಸಿದ್ರು ರಸ್ತೆ ಬದಿಯಲ್ಲೆ ಕೂತು ಕುಡುಕರು ಮಾಡುವ ಹಾವಳಿಯಿಂದ ಜನರು ಹೈರಾಣಾಗಿದ್ದಾರೆ. ಇನ್ನೂ ಈ ಬಗ್ಗೆ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸ್ಥಳಿಯರ ಆತಂಕ ದೂರ ಮಾಡುವ ಕೆಲಸ ಮಾಡಬೇಕಿದೆ..