ಬೆಂಗಳೂರು:- ಡ್ರಂಕ್ & ಡ್ರೈವ್ ವಿರುದ್ಧ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸವಾರರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ನಗರದಲ್ಲಿ ಮದ್ಯಪಾನ ಮಾಡಿ ಹಾಗೂ ಅತಿ ವೇಗದ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳಾ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ 5 ಕೋಟಿ ರೂ. ನೀಡಿದ BCCI!
ಕಳೆದೊಂದು ವಾರದಿಂದ ನಗರದಾದ್ಯಂತ ತಪಾಸಣೆ ನಡೆಸಿದ್ದ ಸಂಚಾರಿ ಪೊಲೀಸರು, ಕಳೆದ ಜನವರಿ 27 ರಿಂದ ಫೆಬ್ರವರಿ 2 ರವರೆಗೂ ಬೆಂಗಳೂರಿನ 50 ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಡ್ರಂಕ್ & ಡ್ರೈವ್ ಚೆಕ್ಕಿಂಗ್ ಮಾಡಿದ್ದಾರೆ.
ಈ ವೇಳೆ ಕಾರು ಬೈಕ್ ಸೇರಿ ಸುಮಾರು 62 ಸಾವಿರದ 300 ವಾಹನ ಸವಾರರಿಗೆ ಡಿಡಿ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಸುಮಾರು 800 ವಾಹನ ಸವಾರರು ಮದ್ಯಸೇವಿಸಿ ವಾಹನ ಚಲಾವಣೆ ಮಾಡ್ತಿರೋದು ಪತಪತ್ತೆಯಾಗಿದ, ಹೀಗಾಗಿ ನಗರದಲ್ಲಿ ಕಳೆದೊಂದು ವಾರದಲ್ಲಿ 800 ವಾಹನ ಸೀಜ್ ಮಾಡಿದ ಸಂಚಾರಿ ಪೊಲೀಸರು, 80 ಲಕ್ಷ ಫೈನ್ ಹಾಕಿದ್ದಾರೆ. ಈ ಬಗ್ಗೆ ಸಂಚಾರಿ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ಮಾಹಿತಿ ನೀಡಿದ್ದಾರೆ.