ನವದೆಹಲಿ: ದೆಹಲಿಯಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದ್ದು, ಒಂದೇ ವಾರದಲ್ಲಿ ಎರಡನೇ ಭರ್ಜರಿ ಬೇಟೆ ಇದಾಗಿದೆ. ದೆಹಲಿ ಪೊಲೀಸರು 2 ಸಾವಿರ ಕೋಟಿ ರೂ. ಮೌಲ್ಯದ 200 ಕೆ.ಜಿ ಕೊಕೇನ್ನ್ನು ವಶಕ್ಕೆ ಪಡೆಯುವ ಮೂಲಕ ಬೃಹತ್ ಜಾಲವನ್ನು ಭೇದಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ ತಂಡವು ಡ್ರಗ್ಸ್ ಪೂರೈಕೆದಾರನನ್ನು ಜಿಪಿಎಸ್ ಮೂಲಕ ರಮೇಶ ನಗರದಲ್ಲಿ ಪತ್ತೆ ಹಚ್ಚಿದ್ದಾರೆ. ಆದರೆ ಆರೋಪಿಗಳು ಲಂಡನ್ಗೆ ಪರಾರಿಯಾಗಿದ್ದು, ಇದು ಅದೇ ಸಿಂಡಿಕೇಟ್ನ ಭಾಗವಾಗಿದೆ. ಪೊಲೀಸರು ಪೂರೈಕೆದಾರನನ್ನು ಪತ್ತೆಹಚ್ಚುವಲ್ಲಿ ಯಶ್ವಸಿಯಾಗಿದ್ದು, 5,600 ಕೋಟಿ ರೂ. ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಒಂದು ವಾರದಲ್ಲೇ 7,500 ಕೋಟಿ ರೂ. ಮೌಲ್ಯದ 762 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು,
Pension: ಹಿರಿಯ ನಾಗರಿಕರಿಗೆ ಶಾಕ್ ಕೊಟ್ಟ ಮೋದಿ ಸರ್ಕಾರ! ಈ ದಾಖಲೆ ಕೊಡದಿದ್ರೆ ಪಿಂಚಣಿ ರದ್ದಾಗುವುದು ಪಕ್ಕಾ
ಇದು ದೇಶದಲ್ಲಿಯೇ ಸಾಗಾಟವಾದ ಅತಿ ಹೆಚ್ಚು ಡ್ರಗ್ಸ್ ಆಗಿದೆ. ದೆಹಲಿ ಪೊಲೀಸರ ಮಾಹಿತಿಯ ಪ್ರಕಾರ, ಜಸ್ಸಿ ಎಂದು ಕರೆಯಲ್ಪಡುವ ಜಿತೇಂದ್ರ ಪಾಲ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪಂಜಾಬ್ ಅಮೃತಸರದ ವಿಮಾನ ನಿಲ್ದಾಣದ ಬಳಿ ಯುಕೆಗೆ ಪ್ರಯಾಣಿಸಲು ಮುಂದಾಗಿದ್ದಾಗ ಆತನನ್ನು ಬಂಧಿಸಿದ್ದಾರೆ.
ಇದು ಪ್ಯಾನ್ ಇಂಡಿಯಾ ನೆಟ್ವರ್ಕ್ನ್ನು ಹೊಂದಿದ್ದು, ದೇಶದಲ್ಲಿ ಸಂಘಟಿತ ಅಪರಾಧವಾಗಿದೆ.ಕಳೆದ 17 ವರ್ಷಗಳಿಂದ ಯುಕೆಯಲ್ಲಿ ವಾಸಿಸುತ್ತಿದ್ದು, ಜಸ್ಸಿ ಪರಾರಿಯಾಗುವ ಪ್ರಯತ್ನದ ಕುರಿತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ಸಿಂಡಿಕೇಟ್ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.