ಗದಗ : ಮಾದಕ ದ್ರವ್ಯ ಮುಕ್ತ ಕರ್ನಾಟಕ ಮತ್ತು ಫಿಟ್ನೆಸ್ ಫಾರ್ ಆಲ್ ಅಭಿಯಾನ ಹಿನ್ನೆಲೆ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಗದಗ ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಪೊಲೀಸ್ ರನ್ 2025 ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.
ಗದಗ ನಗರದ ವಿವಿಧ ಮಾರ್ಗಗಳಲ್ಲಿ 5ಕಿ. ಮೀ ಮತ್ತು 10 ಕಿ .ಮೀ ಎರಡು ಮಾರ್ಗಗಳನ್ನು ಗುರುತಿಸಲಾಗಿತ್ತು. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಪೊಲೀಸ್ ರನ್ ಗೆ ಚಾಲನೆ ನೀಡಿದರು.́
ಕಾರ್ಯಕ್ರಮದಲ್ಲಿ ನಟ ರಿಷಿ, ಬಿಗ್ ಬಾಸ್ ಖ್ಯಾತಿಯ ರಜತ್ ಭಾಗಿಯಾಗಿದ್ದರು. ಜಿಲ್ಲೆಯ ಕ್ರೀಡಾಪಟುಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ನೌಕರರು, ನಾಗರಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪೊಲೀಸ್ ರನ್ ನಲ್ಲಿ ಪಾಲ್ಗೊಂಡಿದ್ದರು. 10 ಕಿ. ಮೀ ಓಟದಲ್ಲಿ ಪ್ರಥಮ ಸ್ಥಾನ ರಮೇಶ ಹಿಂದಿನಮನಿ, ದ್ವಿತೀಯ ಸ್ಥಾನ ಈರಪ್ಪ ಹೊಂಬಳ, ತೃತೀಯ ಸ್ಥಾನ ಅಕ್ಷಯ ಕೊಳ್ಳಿ ಮತ್ತು 5 ಕಿ. ಮೀ ಓಟದಲ್ಲಿ ಪ್ರಥಮ ಸ್ಥಾನ ರಮೇಶ ಸಿಂಗಟಾಲಕೇರಿ, ದ್ವಿತೀಯ ಸ್ಥಾನ ಚಂದ್ರಶೇಖರ ವಡ್ಡಟ್ಟಿ, ತೃತೀಯ ಸ್ಥಾನ ನಿಖಿಲ್ ರಡ್ಡಿ ಪಡೆದುಕೊಂಡರು.