ದಾವಣಗೆರೆ:– ಬರ ಪರಿಹಾರ ಕುರಿತು ಕೇಂದ್ರ ಹಾಣಕಾಸು ಸಚಿವರೊಂದಿಗೆ ಚರ್ಚಿಸಲು ನ 23 ರಂದು ತಾವು ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ದೆಹಲಿಗೆ ತೆರಳುತ್ತಿರುವುದಾಗಿ ಕೃಷಿ ಸಚಿವರಾದ ಎನ್ .ಚಲುವರಾಯಸ್ವಾಮಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ 18000 ಕೋಟಿಗೂ ಅಧಿಕ ಪರಿಹಾರ ಕೋರಲಾಗಿದೆ .ರಾಜ್ಯದ ನಿರಂತರ ಮನವಿಗಳ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಭೇಟಿಗೆ ಸಮಯ ನಿಗಧಿ ಪಡಿಸಿದ್ದು ತಾವು ಸಚಿವರಾದ ಕೃಷ್ಣಾ ಬೈರೇಗೌಡ ಮತ್ತು ಪ್ರಿಯಾಂಕಾ ಖರ್ಗೆ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ರೈತರ ಹಿತ ಸಂರಕ್ಷಣೆ ರಾಜ್ಯ ಸರ್ಕಾರದ ಆದ್ಯತೆ ಅದಕ್ಕೆ ನಾವು ಸದಾ ಎಂದು ಚಲುವರಾಯಸ್ವಾಮಿ ಹೇಳಿದರು.
ಈ ವರ್ಷ ಕೃಷಿ ಭಾಗ್ಯ ಮರು ಜಾರಿ ಗೊಳಿಸಿದ್ದು 200 ಕೋಟಿ ರೂ ವೆಚ್ಚದಲ್ಲಿ 30000 ಕ್ಕೂ ಅಧಿಕ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು ಇದಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆಯಲಾಗಿದೆ ಎಂದು ಚಲುವರಾಯಸ್ವಾಮಿ
ಮಾಹಿತಿ ನೀಡಿದರು.
ಇದೇ ವೇಳೆ ಬೆಳೆ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ .
ಲೋಪ ಎಸಗಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತರು ದೂರು ಸಲ್ಲಿಸಿದ್ದಾರೆ.
ರೈತರ ಹಿತ ಇಲಾಖೆ ಹಾಗೂ ಅಧಿಕಾರಿಗಳ ಮೊದಲ ಆದ್ಯತೆ .
ನಿಲರ್ಕ್ಯ ಧೋರಣೆ ಮುಂದುವರೆಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೃಷಿ ಸಚಿವರು ಎಚ್ಚರಿಕೆ ನೀಡಿದರು.
ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಆಧಿಕಾರಿಗಳ ಜವಾಬ್ದಾರಿ,ಈಗಾಗಲೇ ಕೃಷಿಕರು ನೊಂದಿದ್ದಾರೆ ಅವರಿಗೆ ಬೆಂಬಲವಾಗಿ ನಿಲ್ಲಬೇಕು ,ಬೆಳೆ ಸಮೀಕ್ಷೆ, ವಿಮೆ ಪಾವತಿ ವೇಳೆ ನಷ್ಟವಾಗದಂತೆ ಕಾಳಜಿ ವಹಿಸಬೇಕು ಎಂದರು.
ಕೇಂದ್ರ ಸರ್ಕಾರದ ಎನ್ .ಡಿ.ಆರ್ ಎಫ್ ಮಾನದಂಡಗಳ ಅನ್ವಯ ಬರ ಘೋಷಣೆ ಮಾಡಲಾಗಿದೆ . ಬೆಳೆ ಹಾನಿ ಪರಿಹಾರ ವಿತರಿಸುವಾಗ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಿ ಎಂದು ಸಚಿವರು ಹೇಳಿದರು.
ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಬೇಕು . ಕೃಷಿಕರಿಗೆ ತಾಂತ್ರಿಕ ನೆರವು ಮಾರ್ಗದರ್ಶನ ನೀಡಬೇಕು.
ಜಲ ಸಂರಕ್ಷಣೆಗೆ ಗಮನ ಹರಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಎಲ್ಲಾ ಜಿಲ್ಲೆಗಳಲ್ಲಿ ಕೆವೈಸಿ,ಫ್ರೂಟ್ ಐಡಿ ನೋದಣಿ ಶೇ 100 ರಷ್ಟು ಪೂರ್ಣ ಆಗಬೇಕು. ಎಲ್ಲಾ ಆರ್.ಟಿ.ಸಿ ಗಳ ದಾಖಲೆಯಾಗಬೇಕು.ಇದನ್ನು ಆಂದೋಲನದ ಸ್ವರೂಪದಲ್ಲಿ ಮಾಡಬೇಕು ಎಂದು ಕೃಷಿ ಸಚಿವರು ಸೂಚಿಸಿದರು.
.ಬಿತ್ತನೆಯಲ್ಲಿ ಹೊಸ ತಂತ್ರಜ್ಞಾನ ಯಶಸ್ಸು;ಸಚಿವರ ಮೆಚ್ಚುಗೆ:-
ದಾವಣಗೆರೆ ಜಿಲ್ಲೆಯ ವಿವಿಧೆಡೆ ಹೊಸ ತಂತ್ರಜ್ಞಾನ ಮತ್ತು ಯಾಂತ್ರಿಕತೆ ಬಳಸಿ ತೊಗರಿ , ಗೋವಿನ ಜೋಳ ಹಾಗೂ ಭತ್ತ ಬೇಸಾಯ ಬೇಸಾಯ ಮಾಡಿ ಮಾಡಿ ಅಧಿಕ ಇಳುವರಿ ಪಡೆದಿರುವ ಬಗ್ಗೆ ಜಂಟಿ ಕೃಷಿ ನಿರ್ದೇಶಕರ ಸಭೆಯ ಗಮನಕ್ಕೆ ತಂದರು.
ಇದೊಂದು ಅಭಿನಂದನಾರ್ಹ ಬೆಳವಳಿಗೆ ಮುಂದಿನ ವರ್ಷ ಇನ್ನಷ್ಟು ರೈತರಿಗೆ ಈ ಬಗ್ಗೆ ಅರಿವು ಮೂಡಿಸಿ ಎಂದು ಸಚಿವ ಚಲುವರಾಯಸ್ವಾಮಿ ಸಲಹೆ ನೀಡಿದರು.
ಆರ್ಥಿಕ ವರ್ಷ ಮುಗಿಯುತ್ತಾ ಬಂದಿದ್ದು ಎಲ್ಲಾ ಜಿಲ್ಲೆಗಳಲ್ಲಿ ಶೇ 100 ಆರ್ಥಿಕ ,ಭೌತಿಕ ಗುರಿ ಸಾಧನೆ ಮಾಡಬೇಕು. ಅನುದಾನ ವ್ಯರ್ಥ ವಾಗಬಾರದು ಹಾಗೂ ಗುಣಮಟ್ಟದೊಂದಿಗೆ ಯೋಜನೆಗಳ ಅನುಷ್ಠಾನವಾಬೇಕು ಎಂದು ಕೃಷಿ ಸಚಿವರು ನಿರ್ದೇಶನ ನೀಡಿದರು.
ಚನ್ನಗಿರಿ ಶಾಸಕರಾದ ಬಸವರಾಜು ಶಿವಗಂಗಾ ಹಾಗೂ ಮಾಯಕೊಂಡ ಶಾಸಕ ಬಸವಂತಪ್ಪ ಮತ್ತಿತರರು ಹಾಜರಿದ್ದರು