ಬೆಂಗಳೂರು : ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಇದರ ನಡುವೆ ಈಗ ಸಸ್ಯಕಾಶಿ ಲಾಲ್ಬಾಗ್ಗೂ ಕೂಡ ಜಲಕ್ಷಾಮ ಬಿಸಿ ತಟ್ಟಿದೆ.
BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ!
ಲಾಲ್ಬಾಗ್ ಒಟ್ಟು 240 ಎಕರೆ ವಿಸ್ತೀರ್ಣವಿದ್ದು, ಇಲ್ಲಿ ಒಟ್ಟು 18,000 ಸಸ್ಯಗಳು ಹಾಗೂ 3,000ಕ್ಕೂ ಹೆಚ್ಚು ಜಾತಿಯ ಮರಗಳಿವೆ. ಈಗ ನೀರಿಲ್ಲದೆ ಇವುಗಳ ನಿರ್ವಹಣೆ ಕಷ್ಟಕರವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ವಿದ್ಯುತ್ ಪೂರೈಕೆಯಲ್ಲಿ ಏರಿಳಿತವಾಗುತ್ತಿರುವುದರಿಂದ ಒಳಚರಂಡಿ ಸಂಸ್ಕರಣಾ ಘಟಕದಿಂದ ಬರುವ 1.5 ಎಂಎಲ್ಡಿ ನೀರು ಪಡೆಯುವುದು ಕಷ್ಟಕರವಾಗುತ್ತಿದೆ. ಅಲ್ಲದೇ, ಉದ್ಯಾನವನದ ಐದು ಬೋರ್ ವೆಲ್ಗಳ ನೀರು ಕೂಡ ಕಡಿಮೆಯಾಗಿದೆ.
ಲಾಲ್ಬಾಗ್ನ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, STPಯಿಂದ ಸಂಸ್ಕರಿಸಿದ ನೀರಿನಿಂದ ನಿರ್ವಹಿಸುತ್ತಿದ್ದೇವೆ ಎಂದು ಲಾಲ್ಬಾಗ್ ಜಂಟಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ. ಇನ್ನು ಮಾರ್ಚ್ನಿಂದ ಏಪ್ರಿಲ್ ಅಂತ್ಯದವರೆಗಿನ ತೋಟಗಾರಿಕೆ ಇಲಾಖೆಗೆ ನಿರ್ಣಾಯಕವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಕೆಲವು ಸಸ್ಯಗಳು ಮತ್ತು ಸಣ್ಣ ಮರಗಳಿಗೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಕಳೆದ ವರ್ಷ ಮುಂಗಾರು ವೈಫಲ್ಯ ಮತ್ತು ಬರದ ಪರಿಣಾಮ ಅಂತರ್ಜಲ ಮಟ್ಟ ಕಡಿಮೆಯಾಗಿದೆ.