ಡ್ರೈವರ್ ಸೀಟ್ ನಲ್ಲಿ ಡ್ರೈವರ್ ಇಲ್ಲ. ಡ್ರೈವರ್ ಇಲ್ಲದೆ ಈ ಕಾರು ರಾಜ್ಯ ರಾಜಧಾನಿಯಲ್ಲಿ ಸಂಚಾರ ಮಾಡ್ತಿದೆ. ಯಾವುದೇ ಸಿಗ್ನಲ್, ಯಾವುದೇ ಟ್ರಾಫಿಕ್, ಎಂತಹದ್ರಲ್ಲೂ ಈ ಕಾರು ಸಂಚಾರ ಮಾಡುತ್ತೆ. ಎಲ್ಲೂ ನಿಲ್ಲಲ್ಲ. ಅಕ್ಕಪಕ್ಕದ ಸವಾರರು ಕಾರನ್ನು ಕಂಡು ಶಾಕ್ ಆಗಿ ನೋಡ್ತಿದ್ದಾರೆ.
Karnataka Weather: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ…!
ಜೆಪಿ ನಗರದ ನಿವಾಸಿ ಫರಾನ್, ಕಳೆದ ಹತ್ತು ವರ್ಷಗಳ ಹಿಂದಿನಿಂದ ಕಾರಿನ ಡ್ರೈವರ್ ಸೀಟ್ ನಲ್ಲಿ ಕುಳಿತುಕೊಳ್ಳದೆ ಪಕ್ಕದ ಸೀಟ್ ನಲ್ಲಿ ಕುಳಿತುಕೊಂಡು ಕಾರು ಚಾಲನೆ ಮಾಡುತ್ತಿದ್ದಾರೆ. ಅದು ತನ್ನ ಒಂದೇ ಕಾಲಿನಲ್ಲಿ ಡ್ರೈವ್ ಮಾಡ್ತಿದ್ದಾರೆ. ಬ್ರೇಕ್, ಕ್ಲಚ್, ಆಕ್ಸಿಲೇಟರ್ ಹಾಗೂ ಗೇರ್ ಕೂಡ ಒಂದೇ ಕಾಲಿನಲ್ಲಿ ಅಪರೇಟ್ ಮಾಡ್ತಿದ್ದಾರೆ. ವಿಶೇಷ ಅಂದರೆ ಸ್ಟೇರಿಂಗ್ ಅನ್ನು ಕಾಲಿನಲ್ಲೇ ಆಪರೇಟ್ ಮಾಡ್ತಾರೆ. ಇದು ಹೇಗೆ ಸಾಧ್ಯ ಅಂದರೆ ಫರಾನ್ ಆರಡಿ ಮೂರಿಂಚು ಉದ್ದ ಇದ್ದಾರೆ.
ಇದರಿಂದ ತನ್ನ ಕಾಲಲ್ಲೇ ಆಪರೇಟ್ ಮಾಡಲು ಸಾಧ್ಯವಾಗಿದೆ. ನಾನು ಸಾಕಷ್ಟು ವರ್ಷಗಳಿಂದ ಪ್ರಾಕ್ಟೀಸ್ ಮಾಡಿ ಎಕ್ಸ್ಪಿರಿಯನ್ಸ್ ಆಗಿದೆ, ಹಾಗಾಗಿ ಇದು ಸಾಧ್ಯವಾಗಿದೆ. ಇದನ್ನು ದಯವಿಟ್ಟು ಯಾರು ಟ್ರೈ ಮಾಡಬೇಡಿ ಎಂದು ಮನವಿ ಮಾಡ್ತಿದ್ದಾರೆ.
ಇನ್ನೂ ಫರಾನ್ ಈ ಕಾರಿನ ಮೇಲೆ ಸಾಕಷ್ಟು ಸಮಾಜಕ್ಕೆ ಬೇಕಾದ ಸಂದೇಶಗಳ ಬಿತ್ತಿಪತ್ರಗಳನ್ನು ಹಾಕಿಕೊಂಡು ಸಿಟಿ ರೌಂಡ್ಸ್ ಹಾಕ್ತಾರೆ. ಮಹಿಳೆಯರನ್ನು ಗೌರವಿಸಿ, ಕುಡಿದು ವಾಹನ ಚಾಲನೆ ಮಾಡಬೇಡಿ, ಹೀಗೆ ಕಾರಿನ ಸುತ್ತಲೂ ಸುಮಾರು ಹತ್ತಕ್ಕೂ ಹೆಚ್ಚು ಪೋಸ್ಟರ್ ಗಳನ್ನು ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)