ಸ್ಯಾಂಡಲ್ವುಡ್ ಹಿರಿಯ ನಟಿ ಉಮಾಶ್ರೀ ಸಿನಿಮಾಗೆ ಬರುವ ಮುಂಚೆ ಸಾಕಷ್ಟು ಕಷ್ಟಗಳನು ಅನುಭವಿಸಿದ್ದಾರೆ. ರಂಗಭೂಮಿಯ ಕಲಾವಿದೆಯಾಗಿ ನಟನೆ ಆರಂಭಿಸಿದ ಉಮಾಶ್ರೀ ಬಣ್ಣದ ಲೋಕದ ಪಯಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸದ್ಯ ಸಾಕಷ್ಟು ಖ್ಯಾತಿ ಘಳಿಸಿರುವ ನಟಿ ಸಾಯೋಕಾಗಿಯೇ ಕುಡಿಯೋದನ್ನ ಕಲಿತೆ ಎಂದು ಹೇಳಿದ್ದಾರೆ.
ಇಬ್ಬರು ಮಕ್ಕಳನ್ನ ಅಮ್ಮನ ಮನೆಯಲ್ಲಿ ಬಿಟ್ಟು, 50 ರೂಪಾಯಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಉಮಾಶ್ರೀ ಬದುಕಿ ಕೆಟ್ಟ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. ಉಮಾಶ್ರೀ ಅವರು ತಮ್ಮ ಬದುಕಿನ ಈ ಸತ್ಯಗಳನ್ನ ಮುಕ್ತವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕುಡಿತ ಕಲಿತರೆ ಜೀವ ಹೋಗುತ್ತದೆ ಅನ್ನುವ ನಂಬಿಕೆ ಉಮಾಶ್ರೀ ಅವರಲ್ಲಿ ಹುಟ್ಟಿಕೊಂಡಿತ್ತಂತೆ. ಕುಡಿದು ಕುಡಿದು ಸತ್ತು ಹೋದ್ರಾಯಿತು ಎಂದು ನಿರ್ಧರಿಸಿಯೇ ಬಿಟ್ಟಿದ್ದರಂತೆ. ಸಾಯೋಕಾಗಿ ಆ ದಿನಗಳಲ್ಲಿ ಕುಡಿಯೋದನ್ನ ಕಲಿತುಕೊಂಡರಂತೆ. ಅಂದುಕೊಂಡ ಜೀವನ ಸಿಗದ ಕಾರಣ ಯಾಕೆ ಬದುಕ ಬೇಕು ಎಂದು ಜಿಗುಪ್ಸೆ ಬಂದಿತ್ತು. ಮಕ್ಕಳಿಗಾಗಿಯೇ ಜೀವನ ನಡೆಸಬೇಕು ಅನ್ನೊದು ಒಂದೆಡೆ ಆದರೆ. ಕಷ್ಟದ ಸರಮಾಲೆಗೂ ಇನ್ನೊಂದೆಡೆ.
ಒಂದು ದಿನ ಅಮ್ಮನ ಮನಗೆ ಉಮಾಶ್ರೀ ಅವರು ಹೋಗಿದ್ದರು. ಆಗ ಅಳ್ತಾ ಬಂದ ಮಗಳು ಅಮ್ಮ ನೀನು ಸತ್ತು ಹೋಗ್ತೀಯಂತೆ ಹೌದಾ? ಕುಡಿದು ಕುಡಿದು ಸಾಯ್ತಿ ಅಂತೆ ನಿಜಾನಾ? ಹೀಗೆ ಕೇಳಿಯೇ ಬಿಟ್ಟಳು. ಮತ್ತೊಂದೆಡೆ ಮುಂದೆ ಜೀವನದಲ್ಲಿ ನಾನು ಮದುವೆ ಆಗ್ಬೇಕು ಎಂಬ ವಿಚಾರ ಕೂಡ ಬಂದಿತ್ತು. ಆದರೆ ನನ್ನ ಮಗಳು ಅದಕ್ಕೆ ಒಪ್ಪಲಿಲ್ಲ ಹಾಗಾಗಿ ಮತ್ತೊಂದು ಮದುವೆ ಬಗ್ಗೆ ಆಲೋಚನೆ ಮಾಡಲಿಲ್ಲ ಎಂದು ಉಮಾಶ್ರೀ ಹೇಳಿಕೊಂಡಿದ್ದಾರೆ.