ಬೆಳಗ್ಗೆ ಹೊತ್ತು ಕಾಲಿ ಹೊಟ್ಟೆಯಲ್ಲಿ ಕೆಲ ಜ್ಯೂಸ್ಗಳನ್ನು ಕುಡಿಯುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಾದ್ರೆ ಆ ಜ್ಯೂಸ್ಗಳು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಅದರಲ್ಲೂ ಬೆಳಗ್ಗೆ ಹೊತ್ತು ಕಾಲಿ ಹೊಟ್ಟೆಯಲ್ಲಿ ಕೆಲ ಜ್ಯೂಸ್ಗಳನ್ನು ಕುಡಿಯುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಾದ್ರೆ ಆ ಜ್ಯೂಸ್ಗಳು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಸೌತೆಕಾಯಿ ಜ್ಯೂಸ್: ಜೀ ನ್ಯೂಸ್ ವರದಿ ಪ್ರಕಾರ, ಸೌತೆಕಾಯಿ ಜ್ಯೂಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕ ನಷ್ಟಕ್ಕೂ ಸಹಾಯಕವಾಗಿದೆ. ಈ ಜ್ಯೂಸ್ ಕುಡಿದ ವ್ಯಕ್ತಿಯ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತೆ ಭಾಸವಾಗುತ್ತದೆ ಮತ್ತು ಇದರಲ್ಲಿರುವ ನಾರಿನಂಶವು ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಜ್ಯೂಸ್ ಕುಡಿಯುವಾಗ ನೀವು ನಿಂಬೆ ರಸ ಮತ್ತು ಪುದೀನ ಎಲೆಗಳನ್ನು ಕೂಡ ಸೇರಿಸಬಹುದು.
ಆಮ್ಲಾ ಜ್ಯೂಸ್: ನೀವು ನೆಲ್ಲಿಕಾಯಿ (ಆಮ್ಲಾ) ಜ್ಯೂಸ್ ಕುಡಿಯುವುದರ ಮೂಲಕ ದಿನವನ್ನು ಪ್ರಾರಂಭಿಸಬಹುದು. ನೆಲ್ಲಿಕಾಯಿ ಜ್ಯೂಸ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ ಮತ್ತು ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವಿಸಿದರೆ, ಅದು ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ. ಆಮ್ಲಾ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ ಸಹ ಕುಡಿಯಬಹುದು.ಯ
ಕ್ಯಾರೆಟ್ ಜ್ಯೂಸ್: ತೂಕ ಇಳಿಕೆಯಲ್ಲಿ ಕ್ಯಾರೆಟ್ ಅದ್ಭುತ ಪರಿಣಾಮವನ್ನು ಬೀರುತ್ತದೆ. ಬೆಳಗ್ಗೆ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದರೆ ಮಧ್ಯಾಹ್ನದ ಹೊತ್ತಿಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಈ ರಸಕ್ಕೆ ಸೇಬು, ಕಿತ್ತಳೆ ಮತ್ತು ಚಿಕ್ಕ ಶುಂಠಿಯನ್ನು ಸೇರಿಸಿದರೆ ಅದರ ಪರಿಣಾಮ ಇನ್ನೂ ಉತ್ತಮವಾಗಿರುತ್ತದೆ. ಈ ಜ್ಯೂಸ್ ಕೂಡ ಉತ್ತಮ ಡಿಟಾಕ್ಸ್ ಪಾನೀಯವಾಗಿದೆ.
ಪಾಲಕ್ ಜ್ಯೂಸ್: ಪಾಲಕ್ ರಸವನ್ನು ಆರೋಗ್ಯಕರ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಿನ ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದು ದೇಹಕ್ಕೆ ರಕ್ತವನ್ನು ಪೂರೈಸುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಆಹಾರದೊಂದಿಗೆ ಪಾಲಕ್ ಜ್ಯೂಸ್ ಸಹ ಕುಡಿಯಿರಿ. ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಎಲೆಕೋಸು ಜ್ಯೂಸ್: ಎಲೆಕೋಸು ಜ್ಯೂಸ್ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮಲಬದ್ಧತೆಯ ಸಮಸ್ಯೆಯಿಂದ ನಿಮ್ಮನ್ನು ನಿವಾರಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡಬಹುದು