ಗರಿಕೆ/ದುರ್ವಾ ಹುಲ್ಲು ಸಾಮಾನ್ಯವಾಗಿ ಮನೆಯ ಮುಂದೆ ಹಾಗೂ ಬಯಲು ಪ್ರದೇಶದಲ್ಲಿ ಹೇರಳವಾಗಿರುತ್ತದೆ. ಸುಲಭವಾಗಿ ದೊರೆಯುವ ಈ ಹುಲ್ಲು ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಸಸ್ಯ. ಸೈನೋಡಾನ್ ಡ್ಯಾಕ್ಟಿಲಾನ್ ಎಂದು ಕರೆಯಲ್ಪಡುವ ಈ ಸಣ್ಣ ಹುಲ್ಲನ್ನು ಆಯುರ್ವೇದ ಔಷಧ ವಿಧಾನಗಳಲ್ಲಿ ವಿಶೇಷವಾಗಿ ಬಳಸಲಾಗುವುದು. ಗರಿಕೆ ಹುಲ್ಲಿನಲ್ಲಿ ವಿಶೇಷವಾದ ಔಷಧೀಯ ಗುಣ ಇರುವುದರಿಂದ ಸಾಕಷ್ಟು ಅನಾರೋಗ್ಯಗಳಿಗೆ ಸುಲಭ ಔಷಧವನ್ನಾಗಿ ಬಳಸಬಹುದು.
ರಕ್ತದಲ್ಲಿ ಕೊಲೆಸ್ರ್ಟಾಲ್ ಪ್ರಮಾಣ ಕಡಿಮೆಮಾಡಲು, ಸುಮಾರು ಗರಿಕೆ ಹುಲ್ಲನ್ನು ತೆಗೆದುಕೊಂಡು, ಅದಕ್ಕೆ ಸಲ್ಪ ನೀರು ಬೆರಸಿ, ಮಿಕ್ಸಿಗೆ ಹಾಕಿ ರುಬ್ಬಿ, ನಂತರ ರಸವನ್ನು ಸೋಸಿಕೊಂಡು ಕುಡಿಯಬೇಕು. ಹೀಗೆ 1 ತಿಂಗಳ ಕಾಲ ಮಾಡಿದರೆ, ರಕ್ತ ಶುದ್ಧಿಗೊಂಡು, ರೋಗಗಳು ನಿವಾರಣೆಯಾಗುತ್ತವೆ.
ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ
ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ, ಮಗುವಿಗೆ 1 ಚಮಚ ಗರಿಕೆ ಹುಲ್ಲಿನ ರಸದ ಜೊತೆ ಜೇನು ತುಪ್ಪ ಬೆರಸಿ ಕೊಡುವುದರಿಂದ, ಮಗುವು ದಷ್ಟಪುಷ್ಟವಾಗಿ ಬೆಳೆಯುತ್ತದೆ.
ಬಿದ್ದ ಗಾಯದಿಂದ ರಕ್ತ ಸೋರುವುದನ್ನು ಗರಿಕೆ ಹುಲ್ಲಿನಿಂದ ತಡೆಯಬಹುದು
ಗರಿಕೆ ಹುಲ್ಲನ್ನು ನೀರಿನಲ್ಲಿ ತೊಳೆದು, ನುಣುಪಾಗಿ ಅರೆದು, ಅದರ ರಸವನ್ನು ಅಥವಾ ನುಣುಪಾದ ಹುಲ್ಲನ್ನು ಬಿದ್ದ ಗಾಯಕ್ಕೆ ಹಚ್ಚುವುದರಿಂದ, ರಕ್ತ ಸ್ರಾವವನ್ನು ತಡೆಯಬಹುದು.
ಉಗುರು ಸುತ್ತನ್ನು ಕಡಿಮೆ ಮಾಡಲು ಗರಿಕೆ ಹುಲ್ಲನ್ನು ಉಪಯೋಗಿಸುತ್ತಾರೆ
ಗರಿಕೆ ಹುಲ್ಲನ್ನು ಚೆನ್ನಾಗಿ ಅರೆದು, ಅದಕ್ಕೆ ಅರಿಶಿಣ ಮತ್ತು ಸುಣ್ಣವನ್ನು ಸೇರಿಸಿ, ಉಗುರು ಸುತ್ತಿಗೆ ಹಚ್ಚುವುದರಿಂದ, ಅದು ಕಡಿಮೆಯಾಗುತ್ತದ
ಶೀತ ಕಡಿಮೆ ಮಾಡಲು, ಗರಿಕೆ ಹುಲ್ಲು ಸಹಕಾರಿಯಾಗಿದೆ
ಸ್ವಲ್ಪ ತುಳಸಿ ಮತ್ತು ಸ್ವಲ್ಪ ಗರಿಕೆ ಹುಲ್ಲನ್ನು ನೀರಿಗೆ ಹಾಕಿ, ರಾತ್ರೆ ಕುದಿಸಿಡಬೇಕು. ನಂತರ ಬೆಳಿಗ್ಗೆ ನೀರನ್ನು ಸೊಸಿ ಕುಡಿಯಬೇಕು. ಹೀಗೆ 3 ದಿನಗಳ ಕಾಲ ಕುಡಿಯುವುದರಿಂದ ಶೀತ ಕಡಿಮೆಯಾಗುವುದು.
ಸಾಮಾನ್ಯ ಜ್ವರ ಕಡಿಮೆ ಮಾಡಲು ಗರಿಕೆಹುಲ್ಲು ಉಪಯುಕ್ತವಾಗಿದೆ
ಗರಿಕೆ ಹುಲ್ಲು, ತುಳಸಿ ಮತ್ತು ಒಂದೆಲಗವನ್ನು, ಬೇರು ಸಮೇತವಾಗಿ ನೀರಿಗೆ ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಸ್ವಲ್ಪ ಬೆಲ್ಲ ಸೇರಿಸಿ, 2-3 ದಿನಗಳ ಕಾಲ ಕುಡಿಯುವುದರಿಂದ ಒಳ ಜ್ವರಗಳು ಕಡಿಮೆಯಾಗುತ್ತವೆ.
ಮೈಕೈ ನೋವಿಗೆ ಗರಿಕೆ ಹುಲ್ಲು ಉಪಯುಕ್ತ
ಪ್ರತಿದಿನ ಬಿಸಿ ನೀರಿಗೆ ಗರಿಕೆ ಹುಲ್ಲನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ, ಮೈಕೈ ನೋವು ಕಡಿಮೆಯಾಗುವುದು.
ಅಸ್ತಮಾ, ಅಲರ್ಜಿಗಳಂತಹ ರೋಗಗಳ ನಿವಾರಣೆಗೆ ಗರಿಕೆ ಹುಲ್ಲನ್ನು ಉಪಯೋಗಿಸುತ್ತಾರೆ
ಗರಿಕೆ ಹುಲ್ಲಿನ ರಸವನ್ನು, ಬೆಳಿಗ್ಗೆ ಖಾಲಿ ಹೊಟ್ಟೆಗೆ 2-3 ಚಮಚ ಸೇವಿಸುವುದರಿಂದ ಅಸ್ತಮಾ , ಅಲರ್ಜಿಗಳಂತಹ ರೋಗಗಳನ್ನು ನಿಯಂತ್ರಿಸಬಹುದು.