ಪಂಚದ ನಾನಾ ಭಾಗಗಳಲ್ಲಿ ಬೇವಿನ ಮರಕ್ಕೆ ಮನುಷ್ಯರ ಹಲವಾರು ರೋಗ ಲಕ್ಷಣಗಳನ್ನು ಗುಣಪಡಿಸುವ ವಿಚಾರದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು.
ಇದರ ಔಷಧೀಯ ಗುಣಗಳಿಂದ ನಮ್ಮ ಸೌಂದರ್ಯವನ್ನು ಸಹ ನೈಸರ್ಗಿಕವಾಗಿ ಹೆಚ್ಚು ಮಾಡುತ್ತದೆ. ಬೇವಿನಿಂದ ಸಿಗುವ ಸಾಕಷ್ಟು ಪ್ರಯೋಜನಗಳನ್ನು ನಮ್ಮದಾಗಿಸಿ ಕೊಳ್ಳಬೇಕಾದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಪ್ರತಿ ದಿನ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಿಗಿದು ತಿನ್ನುವುದರಿಂದ ನಮ್ಮ ಹೊಟ್ಟೆಗೆ ಸಂಬಂಧ ಪಟ್ಟಂತಹ ಸಾಕಷ್ಟು ಆರೋಗ್ಯ ಸಮಸ್ಯೆಗಳು ಅಂದರೆ ಅಜೀರ್ಣತೆ, ಮಲಬದ್ಧತೆ, ಆಮ್ಲೀಯತೆ ದೂರವಾಗಿ ಕರುಳಿನ ಭಾಗ ಆರೋಗ್ಯದಿಂದ ಕೂಡಿ ಆಹಾರದ ಜೀರ್ಣ ಪ್ರಕ್ರಿಯೆ ಉತ್ತಮವಾಗಿ ಆಗುತ್ತದೆ.
ಈ ಸಿಹಿಯಾದ ಹಣ್ಣು ತಿಂದ್ರೆ ಸಕ್ಕರೆ ಕಾಯಿಲೆಗೆ ಒಳ್ಳೆಯದಂತೆ: ಮಧುಮೇಹಗಳೇ ತಪ್ಪದೇ ಓದಿ!
ಮುಖ್ಯವಾಗಿ ನಮ್ಮ ದೇಹದಲ್ಲಿ ಆಹಾರ ಜೀರ್ಣವಾಗುವ ಸಮಯದಲ್ಲಿ ಉತ್ಪತ್ತಿಯಾಗುವ ಹಲವಾರು ವಿಷಕಾರಿ ಅಂಶಗಳು ಹೊಟ್ಟೆಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಬೇವಿನ ಸೇವನೆಯಿಂದ ಇಂತಹ ಹಲವಾರು ಸಮಸ್ಯೆಗಳು ಮುಕ್ತಿ ಕಾಣುತ್ತವೆ.
ಕೇವಲ ಕೆಲವು ಮಂದಿಗೆ ಮಾತ್ರ ಆಯುರ್ವೇದ ಪದ್ಧತಿಯಲ್ಲಿ ಚರ್ಮದ ಸಮಸ್ಯೆಗಳನ್ನು ಬಗೆಹರಿಸಲು ಬೇವಿನ ಎಣ್ಣೆ ಬದಲು ಬೇವಿನ ಎಲೆಗಳನ್ನು ಬಳಸುತ್ತಾರೆ ಎಂಬ ಸತ್ಯ ತಿಳಿದಿದೆ.
ಇದಕ್ಕೆ ಕಾರಣ ಎಂದರೆ ತಾಜಾ ಬೇವಿನ ಎಲೆಗಳಲ್ಲಿ ಸಾಕಷ್ಟು ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳು ತುಂಬಿದ್ದು, ಈ ಅಂಶಗಳು ಬೇವಿನ ಎಲೆಗಳನ್ನು ಸಂಸ್ಕರಿಸಿ ತಯಾರು ಮಾಡಿದ ಬೇವಿನ ಎಣ್ಣೆ, ಬೇವಿನ ಸೋಪು ಮತ್ತು ಬೇವಿನ ಕ್ರೀಮ್ ಇತ್ಯಾದಿಗಳಲ್ಲಿ ಲಭ್ಯವಿರುವುದಿಲ್ಲ.
ಹಾಗಾಗಿ ಚರ್ಮದ ಹಲವಾರು ಸಮಸ್ಯೆಗಳಿಗೆ ನೇರವಾಗಿ ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಹಚ್ಚಿ ಬಗೆಹರಿಸಿಕೊಳ್ಳಬಹುದು. ನಿತ್ಯ ನಿಯಮಿತವಾಗಿ ಬೇವಿನ ಎಲೆಗಳನ್ನು ಸೇವಿಸುವುದರಿಂದ ಚರ್ಮದ ಮೇಲಿನ ಕಲೆಗಳು, ಗುಳ್ಳೆಗಳು, ಮಚ್ಚೆಗಳು ಮಾಯವಾಗುತ್ತದೆ ಎಂದು ಹೇಳುತ್ತಾರೆ.
ಯಾವುದೇ ಬಗೆಯ ಸೋಂಕುಗಳಿಂದ ಚರ್ಮದ ಮೇಲೆ ಉಂಟಾಗಿರುವ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ಒಣ ಚರ್ಮಕ್ಕೆ ಅಥವಾ ಬಿರುಕು ಬಿಟ್ಟ ಚರ್ಮಕ್ಕೆ ಬೇವು ತುಂಬಾ ಸಹಕಾರಿ.