ಬೆಂಗಳೂರು: ವಿಷ್ಣುವರ್ಧನ್ (Vishnuvardhan) ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳೆಲ್ಲರೂ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ (Protest) ಹಮ್ಮಿಕೊಂಡಿದ್ದಾರೆ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಹೋರಾಟ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ವಿಷ್ಣು ಅಭಿಮಾನಿಗಳಿಂದ ಪ್ರತಿಭಟನೆ ನಡೆಯುತ್ತಿದ್ದು ವಿಷ್ಣುವರ್ಧನ್ ಇಹಲೋಕ ತ್ಯಜಿಸಿ 14 ವರ್ಷಗಳು ಕಳೆದಿವೆ ಆದ್ರೂ ನಿರ್ಣಾಯಕ ಅಂತ್ಯ ಕಾಣದ ಸ್ಮಾರಕ ವಿಚಾರ ಬೆಂಗಳೂರಿಗೆ ಕರ್ನಾಟಕದ ಬೇರೆ ಜಿಲ್ಲೆಗಳಿಂದಲೂ ಬಂದ ಅಭಿಮಾನಿಗಳು ಬೆಂಗಳೂರಿನಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಆಗುವಂತೆ ಒತ್ತಾಯ ವಿಷ್ಣು ಪುಣ್ಯಭೂಮಿಗಾಗಿ ‘ಅಭಿಮಾನ’ದ ಹೋರಾಟ..! ‘ಯಜಮಾನ’ರ ಪುಣ್ಯಭೂಮಿ ನಮ್ ಹಕ್ಕು ಅಂತಿರೋ ವಿಷ್ಣು ಫ್ಯಾನ್ಸ್ ವಿಷ್ಣುವರ್ದನ್ ಅಭಿಮಾನಿಗಳ ಹೋರಾಟಕ್ಕೆ ಕರವೆ ಬೆಂಬಲ ಕೂಡ ನೀಡಿದೆ.
ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲಿ ಆಗುವಂತೆ ಒತ್ತಾಯ ನನ್ನ ಒತ್ತಾಯವಿದೆ ಈ ಬಗ್ಗೆ ಡಿಕೆ ಶಿವಕುಮಾರ್ ಬಳಿಯೂ ಮಾತನಾಡಿದ್ದೇನೆ ಡಿಕೆ ಶಿವಕುಮಾರ್ ಕೂಡ ಭರವಸೆ ನೀಡಿದ್ದಾರೆ ಬೇಡಿಕೆ ಇರುವ 10 ಗುಂಟೆ ಜಾಗ ಕೊಡಿಸುತ್ತೇನೆ ಎಂದಿದ್ದಾರೆ ಹೋರಾಟಗಾರ ಶ್ರೀನಿವಾಸ್ ರನ್ನ ಕರೆಯುವಂತೆ ತಿಳಿಸಿದ್ದಾರೆ ಕೂಡಲೇ ಈ ಬಗ್ಗೆ ಅಂತಿಮ ನಿರ್ಧಾರ ಆಗಲಿದೆ ಇಡೀ ಕರ್ನಾಟಕಕ್ಕೆ ಇದು ಒಳ್ಳೆ ಸಂದೇಶ ಎಂದು ಫ್ರೀಡಂ ಪಾರ್ಕ್ ಬಳಿ ಕರವೇ ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.