ಕಲಬುರಗಿ: ಕಲಬುರಗಿಯ ಡಾ.ಪಿಎಸ್ ಶಂಕರ ಪ್ರತಿಷ್ಡಾನದ 24 ನೇ ವಾರ್ಷಿಕೋತ್ಸವ ಜನೆವರಿ 1 ರಂದು ನಡೆಯಲಿದ್ದು ಹೆಸರಾಂತ ಇಬ್ಬರು ವೈದ್ಯರಿಗೆ ವೈದ್ಯಶ್ರೀ ಹಾಗು ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಅಂತ ಪ್ರತಿಷ್ಡಾನದ ಕಾರ್ಯದರ್ಶಿ ನರೇಂದ್ರ ಬಡಷೇಸಿ ಹೇಳಿದ್ದಾರೆ..
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಪ್ರತಿಷ್ಡಾನದ ಪ್ರಮುಖರು ಈ ಬಾರಿ ಡಾ.ಕೆ ವಿಜಯಲಕ್ಷ್ಮಿ ಹಾಗು ಅಮರನಾಥ ಸೋಲಾಪುರೆ ಇಬ್ಬರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಅಂತ ಹೇಳಿದ್ರು.
ಇದೇವೇಳೆ 10 ವೈದ್ಯ ವಿದ್ಯಾರ್ಥಿ ಮತ್ತು ಓರ್ವ ಇಂಜಿನಿಯರ್ ವಿದ್ಯಾರ್ಥಿಗೆ ಶಿಕ್ಷಣ ಮುಗಿಯೋತನಕ ಪ್ರತಿ ತಿಂಗಳ ಒಂದು ಸಾವಿರ ಸಹಾಯಧನ ನೀಡಲಾಗುವುದು ಅಂತ ತಿಳಿಸಿದ್ರು.ಜನೆವರಿ ಒಂದರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದ್ರು.