ಬೆಂಗಳೂರು:- ಬಡ ಹೃದ್ರೋಗಿಗಳ ಆಶಾಕಿರಣ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಸೇವಾವಧಿ ನಾಳೆ ಮುಕ್ತಾಯ ಆಗಲಿದೆ.
ಸರಕಾರಿ ಸ್ವಾಯತ್ತತೆಯ ಆಸ್ಪತ್ರೆಯೊಂದು ಒಂದು ಖಾಸಗಿ ಪಂಚತಾರಾ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ನೆರವು, ಸೌಲಭ್ಯಗಳು, ಶ್ರೀಮಂತರಿಗೆ ಸಿಗುವ ಶ್ರೀಮಂತ ಚಿಕಿತ್ಸೆ ಬಡವರಿಗೆ, ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡುವುದು ತನ್ನ ತಪಸ್ಸಾಗಿತ್ತು ಅದು ಈಡೇರಿದೆ, ಹಾಗಾಗಿ ಸಂತೃಪ್ತ ಭಾವದಿಂದ ನಿವೃತ್ತನಾಗುತ್ತಿದ್ದೇನೆ ಎಂದು ಡಾ ಮಂಜುನಾಥ್ ಹೇಳುತ್ತಾರೆ. ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ನೆರವಾದ ಸರಕಾರ, ಮತ್ತು ದಾನಿಗಳನ್ನು ಡಾ ಮಂಜುನಾಥ್ ಕೃತಜ್ಞತೆಯಿಂದ ನೆನೆಯುತ್ತಾರೆ.
ಹಣವಿಲ್ಲದೆ, ಸೂಕ್ತ ದಾಖಲಾತಿಗಳಿಲ್ಲದೆ ಚಿಕಿತ್ಸೆಗೆ ಬರುತ್ತಿದ್ದ ಹೃದ್ರೋಗಿಗಳು ಗುಣಮುಖರಾಗಿ ಅವರ ಕುಟುಂಬ ಸದಸ್ಯರೊಂದಿಗೆ ನಗುನಗುತ್ತಾ ಮನೆಗೆ ಹೋಗುವ ದೃಶ್ಯ ತನ್ನಲ್ಲಿ ಸಾರ್ಥಕತೆಯ ಭಾವ ಮೂಡಿಸುತ್ತಿತ್ತು ಎಂದು ಡಾ ಮಂಜುನಾಥ್ ಹೇಳುತ್ತಾರೆ.