ಗದಗ: ಲಾರಿ ಹರಿದು ಹತ್ತಾರು ಕುರಿಗಳು ಸಾವನ್ನಪ್ಪಿ, 20 ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಟೋಲ್ ಗೇಟ್ ಬಳಿ ರಾತ್ರಿ ನಡೆದಿದೆ. ಕಕ್ಕೂರು ಗ್ರಾಮದ ಮಂಜುನಾಥ್ ದಳವಾಯಿ ಎಂಬುವರಿಗೆ ಸೇರಿದ ಕುರಿಗಲಾಗಿದ್ದು, ಮೈಲಾರಲಿಂಗೇಶ್ವರ ಶುಗರ್ಸ್ ಫ್ಯಾಕ್ಟರಿಯಿಂದ ಮುಂಡರಗಿ ಪಟ್ಟಣದತ್ತ ಲಾರಿ ಬರುತ್ತಿತ್ತು ಎನ್ನಲಾಗಿದೆ.
ಕೇವಲ ಈ ಒಂದು ಕಾರ್ಡ್ʼನಿಂದ ಪಡೆಯಬಹುದು 5 ಲಕ್ಷದ ಆರೋಗ್ಯ ಕವರೇಜ್! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ..?
ರಾತ್ರಿಯಾಗಿದ್ದರಿಂದ ವೇಗವಾಗಿ ಬಂದ ಲಾರಿ ಕುರಿಗಳ ಮೇಲೆ, ಹರಿದು ಎದುರಿನಲ್ಲಿದ್ದ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ತಮಿಳನಾಡು ಮೂಲದ ಲಾರಿ ಹಾಗೂ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.