ಬೆಂಗಳೂರು;- ಸಿಎಂ ಕುರ್ಚಿ ಮೇಲೆ ಡಜನ್ಗಟ್ಟಲೆ ಜನರು ಕಣ್ಣಿಟ್ಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಿಎಂ ಕುರ್ಚಿ ಮೇಲೆ ಡಜನ್ಗಟ್ಟಲೆ ಜನರು ಕಣ್ಣಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯನವರು ಸಿಎಂ ಆಗಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂಬ ಅರ್ಥದಲ್ಲಿ ಪ್ರಧಾನಿಯವರು ಹೇಳಿಕೆ ನೀಡಿದ್ದಾರೆ ಎಂದರು.
ಗ್ಯಾರಂಟಿ ಘೋಷಿಸಿದ್ದು, ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿಲ್ಲ. ಯಾವುದೇ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ ಎಂದಿದ್ದಾರೆ. ನಾವೇನೂ ಗ್ಯಾರಂಟಿ ವಿರೋಧಿಗಳು ಅಲ್ಲ. ಖಜಾನೆಯಲ್ಲಿರುವ ಹಣ ಗಮನಿಸದೆ ಜನರಿಗೆ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳುವುದು ಹೇಗೆ? ನಿಜವಾಗಿ ನಾವು ಕೊಟ್ಟ ಆಶ್ವಾಸನೆಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ವಿವೇಚಿಸಬೇಕಾಗಿತ್ತು. ಮತ್ತು ಆ ನಿಟ್ಟಿನಲ್ಲಿ ಪರಿಜ್ಞಾನ ಇರಬೇಕಿತ್ತು ಎಂದು ಹೇಳಿದ್ದಾರೆ.
ಸಂಪೂರ್ಣವಾಗಿ ಇಡೀ ಸರಕಾರವು ಭ್ರಷ್ಟಾಚಾರದ ಕೂಪದಲ್ಲಿ ತುಂಬಿ ಹೋಗಿದೆ. ಭ್ರಷ್ಟಾಚಾರದ ಕಾರಣದಿಂದ ರಾಜ್ಯ ದಿವಾಳಿ ಆಗಿದೆ. ಬರ ಪರಿಸ್ಥಿತಿ ತೀವ್ರವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಿದೆ. ಇವೆಲ್ಲವನ್ನೂ ಸರಕಾರ ಗಮನಿಸುತ್ತಿಲ್ಲ ಎಂಬುದನ್ನು ಎಚ್ಚರಿಕೆಯ ರೂಪದಲ್ಲಿ ಪ್ರಧಾನಿಯವರು ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ಅದನ್ನು ಬೇರೆ ರೀತಿಯಲ್ಲಿ ತೆಗೆದುಕೊಂಡು ಪುರಾವೆ ಕೇಳುತ್ತಿದ್ದಾರೆ. ಏನು ಪುರಾವೆ ಬೇಕಿತ್ತು ನಿಮಗೆ ಎಂದು ಪ್ರಶ್ನಿಸಿದರು.
5 ಗ್ಯಾರಂಟಿ ಕೊಟ್ಟಿದ್ದೀರಲ್ಲ? ಯಾವ ಗ್ಯಾರಂಟಿ ಸರಿಯಾಗಿ ಜನರಿಗೆ ತಲುಪಿದೆ ಹೇಳಿ? ಎಂದು ಕೇಳಿದರು. ಸಿಎಂ ಪ್ರತಿದಿನ ಸುಳ್ಳು ಹೇಳುತ್ತಾರೆ. ನಿಮ್ಮ ಡಿಸಿಎಂ ಡಿ.ಕೆ.ಶಿವಕುಮಾರರನ್ನು ನಂಬುತ್ತೀರಾ? ಸಿಎಂ ರವರು ಶಿವಕುಮಾರರಿಗೆ ಗೌರವ ಕೊಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.