ಕನ್ನಡ ಚಿತ್ರರಂಗದ ಅಪರೂಪದ ಮಾಣಿಕ್ಯ ಪುನೀತ್ ರಾಜ್ ಕುಮಾರ್.. ಬಾಲನಟನಾಗಿ ಅತೀ ಸಣ್ಣ ವಯಸ್ಸಿಗೆ ನ್ಯಾಷನಲ್ ಅವಾರ್ಡ್ ಪಡೆದ ದೊಡ್ಮನೆ ಕಲಾ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಕೊಟ್ಟ ಚಿತ್ರ ಅಪ್ಪು.. 2002ರಲ್ಲಿ ರಿಲೀಸ್ ಆಗಿದ್ದ ಅಪ್ಪು ಚಿತ್ರ ಅಂದು ಹಲವು ದಾಖಲೆಗಳನ್ನು ಉಡೀಸ್ ಮಾಡಿತ್ತು.. ಸುಮಾರು 23 ವರ್ಷಗಳ ಬಳಿಕ ಇದೀಗ ಪುನೀತ್ ಸ್ಟಾರ್ ಪವರ್ ಎಂಟ್ರಿ ಕೊಟ್ಟ ಅಪ್ಪು ಚಿತ್ರ ರಿರಿಲೀಸ್ ಆಗ್ತಿದೆ. ಅದೂ ಅಲ್ಲದೇ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ..
ಮಾರ್ಚ್ 17 ಕ್ಕೆ ಪುನೀತ್ ಅವರಿಗೆ 50 ನೇ ವರ್ಷದ ಹುಟ್ಟು ಹಬ್ಬ ಇದೆ. ಹೀಗಾಗಿ ಅಶ್ವಿನಿ ಹಾಗೆ ಪುನೀತ್ ಬರ್ತ್ ಡೇ ಸಮಯಕ್ಕೆ ದೊಡ್ಮನೆ ಅಭಿಮಾನಿಗಳಿಗೆ ಅಪ್ಪು ಗಿಫ್ಟ್ ಆಗಿ ರೀ-ರಿಲೀಸ್ ಆಗುತ್ತಿದೆ. ಇಂದಿನಿಂದ ರಾಜ್ಯಾದ್ಯಂತ ಪುನೀತ್ ರಾಜ್ ಕುಮಾರ್ ಅಪ್ಪು ಸಿನಿಮಾ ರೀ ರಿಲೀಸ್ ಆಗಿದ್ದು, ಕಾಕತಾಳೀಯವೆಂಬಂತೆ ಇದು ಅಶ್ವಿನಿ ಪುನೀತ್ ರಾಜ್ ಕುಮಾರ್ ಜನುಮದಿನ ಕೂಡ ಹೌದು. ಹೀಗಾಗಿ ಫ್ಯಾನ್ಸ್ ಅಪ್ಪು ಅವರ ಮುಂಬರೋ ಬರ್ತ್ ಡೇ ಸೇರಿ ತ್ರಿಬಲ್ ಸಂಭ್ರಮ ಆಚರಿಸೋಕೆ ಮುಂದಾಗಿದ್ದಾರೆ.
ಇನ್ನೂ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಕೂಡ ಫ್ಯಾನ್ಸ್ ಜೊತೆಗೆ ಅಪ್ಪು ಸಿನಿಮಾ ವೀಕ್ಷಿಸಲಿರೋದು ವಿಶೇಷ..