ವಾಟ್ಸ್ಆಪ್(WhatsApp) ಬಳಕೆದಾರರಿಗೆ ಇದು ಗುಡ್ ನ್ಯೂಸ್. ವಾಟ್ಸ್ಆಪ್(WhatsApp)ನಲ್ಲಿ ಮತ್ತೊಂದು ಹೊಸ ಫೀಚರ್(ವೈಶಿಷ್ಟ್ಯ) ಲಭ್ಯವಿದೆ. ಇನ್ನುಮುಂದೆ ಬಳಕೆದಾರರು ಒಂದೇ ಮೊಬೈಲ್(ಫೋನ್)ನಲ್ಲಿ ಎರಡು ವಾಟ್ಸ್ಆಪ್ ಅಕೌಂಟ್ಗಳನ್ನು ಬಳಸಲು ಸಾಧ್ಯವಾಗಲಿದೆ. ವಾಟ್ಸ್ಆಪ್ ಖಾತೆಯಲ್ಲಿನ ಕ್ಯೂಆರ್(QR) ಕೋಡ್ ಆಯ್ಕೆಯಲ್ಲಿ ಬಾಣದ ಐಕಾನ್ ಸಹಾಯದಿಂದ ಬಳಕೆದಾರರು ಇನ್ನೊಂದು ಅಕೌಂಟ್(ಖಾತೆ) ಅನ್ನು ಸೇರಿಸಬಹುದಾಗಿದೆ.
ಇವರಿಗೆ ಮಾತ್ರ ಹೊಸ ಫೀಚರ್
ಪ್ರಸ್ತುತ ಈ ಫೀಚರ್ ವಾಟ್ಸ್ಆಪ್(WhatsApp) ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಶೀಘ್ರದಲ್ಲಿಯೇ ಎಲ್ಲಾ ಬಳಕೆದಾರರಿಗೂ ಈ ಫೀಚರ್ ಲಭ್ಯವಾಗಲಿದೆ. ಜನಪ್ರಿಯ ಮೆಸೇಜಿಂಗ್ ಆಪ್ ಇಂದು ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ವಾಟ್ಸ್ಆಪ್ ಸಂವಹನ ನಿರೀಕ್ಷೆಗೂ ಮೀರಿ ನಿಂತಿದೆ. ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ.