ಬಿಗ್ ಬಾಸ್ ಮನೆಯ (Bigg Boss Kannada 10) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟಕ್ಕೆ ತೆರೆ ಬೀಳಲು ಕೆಲವೇ ಕೆಲವು ದಿನ ಬಾಕಿಯಿದೆ. ಹೀಗಿರುವಾಗ ಮನೆಗೆ ಕುಟುಂಬಸ್ಥರ ಆಗಮನವಾಗುತ್ತಿದೆ. ಅದರಂತೆಯೇ ಸಂಗೀತಾ (Sangeetha Sringeri) ಫ್ಯಾಮಿಲಿ (Family) ಎಂಟ್ರಿ ಕೊಡುತ್ತಿದ್ದಂತೆ ವಿನಯ್ – ತುಕಾಲಿ ಎದುರು ಬರಲಾರದೇ ಅವಿತು ಕುಳಿತುಕೊಂಡಿದ್ದಾರೆ. ಅದಷ್ಟೇ ಅಲ್ಲ, ಎಷ್ಟು ಕಳಪೆ ಕೊಟ್ರು ತಲೆಕೆಡಿಸಿಕೊಳ್ಳಬೇಡ ಎಂದು ಅತ್ತಿಗೆ ಸುಚಿತ್ರಾ ಅವರು ಸಂಗೀತಾ ಕಿವಿ ಮಾತು ಹೇಳಿದ್ದಾರೆ.
ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸಂಗೀತಾ ಅವರ ತಂದೆ ಶಿವಕುಮಾರ್, ತಾಯಿ ಭವಾನಿ, ಅತ್ತಿಗೆ ಸುಚಿತ್ರಾ, ಅಣ್ಣ ಕೂಡ ದೊಡ್ಮನೆಗೆ ಬಂದಿದ್ದಾರೆ. ಇಲ್ಲಿಯವರೆಗೆ ಪ್ರತಿ ಸ್ಪರ್ಧಿ ಮನೆಯಿಂದ ಒಬ್ಬರು, ಇಬ್ಬರು ಬಂದಿದ್ದರೆ, ಸಂಗೀತಾ ಮನೆಯಿಂದ ನಾಲ್ವರು ಬಂದಿದ್ದರು.
ಮೊದಲು ಎಂಟ್ರಿ ಕೊಟ್ಟ ಅತ್ತಿಗೆ ಸುಚಿತ್ರಾಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಾನು ಏನೇ ಮಾಡಿದ್ರೂ ಎಲ್ಲರೂ ವಿರೋಧಿಸುತ್ತಾರೆ. ನನಗೆ ಇದೇ ವಿಷಯಕ್ಕೆ ಬೇಸರ ಆಗಿ ಅಳ್ತಿದೀನಿ ಅಷ್ಟೇ. ನಾನು ಕನ್ನಿಂಗ್, ನೆಗೆಟಿವ್, ಅವಕಾಶವಾದಿ ಅಂತ ಎಲ್ಲರೂ ಹೇಳ್ತಿದ್ದಾರೆ. ನಾನು ನೆಗೆಟಿವ್ ಆಗಿ ಕಾಣ್ತಿದೀನಾ? ನಾನು ಯಾರದ್ದಾದರ ಬಗ್ಗೆ ಕೆಟ್ಟದಾಗಿ ಮಾತಾಡಿದ್ನಾ? ಎಂದು ಅತ್ತಿಗೆ ಸಂಗೀತಾ ಪ್ರಶ್ನೆ ಹಾಕಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ನಮ್ರತಾಗೆ ಎಲ್ಲರೂ ಮತ ಹಾಕಿದ್ರು. ನಾನು ಆ ಜಾಗದಲ್ಲಿ ಇದ್ದಿದ್ರೆ ಯಾರೂ ಮತ ಹಾಕ್ತಿರಲಿಲ್ಲ. ನಮ್ರತಾಳನ್ನು ಎಲ್ಲರೂ ಇಷ್ಟಪಡ್ತಿರೋ ಹಾಗೆ ನನ್ನ ಯಾಕೆ ಇಷ್ಟಪಡಲ್ಲ? ನನಗೆ ಪ್ರತಿ ಸಲ ಕಳಪೆ ಕೊಡ್ತಾರೆ, ನನಗೆ ಉತ್ತಮ ಸಿಗಲ್ಲ. ನಾನು ಕಳೆದ ಬಾರಿ ಚೆನ್ನಾಗಿ ಆಡಿದ್ರೂ ಕಳಪೆ ಕೊಟ್ಟರು. ಮುಂದಿನ ವಾರವೂ ಅದೇ ಕಥೆ ಆಗತ್ತೆ ಎಂದು ಸಂಗೀತಾ ಅವರು ಬೇಸರ ಹೊರಹಾಕಿದ್ದಾರೆ.