ಸ್ಮಾರ್ಟ್ಫೋನ್ಗಳು ಈಗ ಪ್ರತಿಯೊಬ್ಬರಿಗೂ ಅಗತ್ಯ ಸಾಧನವಾಗಿದೆ. ಆದ್ರೆ ಕೆಲವೊಬ್ಬರು ಹಲವಾರು ವರ್ಷಗಳಿಂದ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಿರುತ್ತಾರೆ. ಆದ್ರೆ ನಂತರ ಆ ಫೋನ್ಗಳು ಹಳೆಯದಾದಾಗ ಸೇಲ್ ಮಾಡಲು ಮುಂದಾಗುತ್ತಾರೆ.
ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಗಳಿದ್ರೆ ಇಂದೇ ಡಿಲೀಟ್ ಮಾಡಿ: ಗೂಗಲ್ ಕೊಟ್ಟ ಎಚ್ಚರಿಕೆ ಏನು!?
ಅನೇಕರು ತಮ್ಮ ಹಳೆಯ ಮೊಬೈಲ್ಗಳನ್ನು ಶಾಪ್ಗಳಲ್ಲಿ ಮಾರಾಟ ಮಾಡಲು ಪ್ರಯತ್ನ ಮಾಡ್ತಾರೆ. ಆಗ ನಾವು ಅಂದುಕೊಂಡ ಬೆಲೆಗೆ ಸೇಲ್ ಆಗುವುದಿಲ್ಲ. ಹಾಗಾಗಿ ಸೆಕೆಂಡ್ ಹ್ಯಾಂಡ್ಗೆ ಮೊಬೈಲ್ ಮಾರಾಟ ಮಾಡಲು ಏನು ಮಾಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳಿ…
ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ ನಿಮ್ಮ ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಾಡಲು ನಿಮಗೆ ಸಹಾಯ ಮಾಡುತ್ತದೆ. ತ್ವರಿತ ನಗದು ಸೇವೆಗಾಗಿ ಫ್ಲಿಪ್ಕಾರ್ಟ್ ಮರುಹೊಂದಿಸುವ ಮೂಲಕ, ನಿಮ್ಮ ಹಳೆಯ ಫೋನ್ ಅನ್ನು ನೀವು ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಬಳಸಿದ ಫೋನ್ಗೆ ಪ್ರತಿಯಾಗಿ ಫ್ಲಿಪ್ಕಾರ್ಟ್ ನಿಮಗೆ 80,000 ರೂ. ವರೆಗಿನ ಬೆಲೆಯನ್ನು ನೀಡಬಹುದು. ಇದು ಅಚ್ಚರಿ ಮೂಡಿಸಿದರೂ ಇದು ಸತ್ಯ…
ನಿಮ್ಮ ಮೊಬೈಲ್ ಅನ್ನು ಮಾರಾಟ ಮಾಡಲು ನೀವು ಅಂಗಡಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ಮನೆಯಲ್ಲಿಯೇ ಕುಳಿತು ಮಾರಾಟ ಮಾಡಬಹುದು. ನೀವು ಎಲ್ಲಿದ್ದಿರೋ ಅಲ್ಲಿಂದಲೇ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತದೆ.
ನೀವು ಮಾಡಬೇಕಾಗಿರುವುದು ಆನ್ಲೈನ್ನಲ್ಲಿ ರಿಕ್ವಸ್ಟ್ ಕಳಿಸಿ, ನಿಮ್ಮ ಫೋನ್ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಹಳೆಯ ಫೋನ್ನ ಸ್ಥಿತಿಯನ್ನು ಪರಿಗಣಿಸಿದ ನಂತರ ಫ್ಲಿಪ್ಕಾರ್ಟ್ ನಿಮಗೆ ಹಣವನ್ನು ನೀಡುತ್ತದೆ.
ತ್ವರಿತ ನಗದು ಸೇವೆಗಾಗಿ ಫ್ಲಿಪ್ಕಾರ್ಟ್ನಲ್ಲಿ ಮೀಸಲಾದ ವಿಶೇಷ ಪೇಜ್ ಇದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಈ ಪೇಜ್ ಅನ್ನು ತಲುಪಬಹುದು. ಇಲ್ಲಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು
ಫೋನ್ ವಿವರಗಳು: ಈ ಆಯ್ಕೆಯಲ್ಲಿ, ಫೋನ್ ಹೆಸರು, ಮಾದರಿ ಇತ್ಯಾದಿ ಹಳೆಯ ಫೋನ್ನ ವಿವರಗಳನ್ನು ನಮೂದಿಸಬೇಕು. ಇದರ ನಂತರ ಫೋನ್ ಮಾರಾಟ ಮಾಡಲು ವಿನಂತಿಯನ್ನು ನೀಡಬೇಕು
ಮೌಲ್ಯಮಾಪನ ಮತ್ತು ಪಿಕಪ್: ಫ್ಲಿಪ್ಕಾರ್ಟ್ ಉದ್ಯೋಗಿ ನಿಮ್ಮ ಫೋನ್ ಅನ್ನು ಮೌಲ್ಯಮಾಪನ ಮಾಡುತ್ತಾರೆ. ನಿಮ್ಮ ಫೋನ್ನ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿ ಹಣವನ್ನು ನೀಡಲಾಗುತ್ತದೆ. ಇದರ ನಂತರ ಪಿಕಪ್ ಅನ್ನು ನಿರ್ಧರಿಸಲಾಗುತ್ತದೆ.
ತ್ವರಿತ ಬ್ಯಾಂಕ್ ವರ್ಗಾವಣೆ: ಪಿಕಪ್ ನಂತರ, ನೀವು ಪಾವತಿ ಬಯಸುವ ಮೋಡ್ ಪ್ರಕಾರ ಹಣವನ್ನು ನಿಮಗೆ ವರ್ಗಾಯಿಸಲಾಗುತ್ತದೆ.