ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಈ ಸಿನಿಮಾ ಸದ್ಯಲ್ಲೇ ಓಟಿಟಿಗೆ ಬರುತ್ತೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಯುಐ ಸಿನಿಮಾದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.
ನಮ್ಮ ಯುಐ ಚಿತ್ರದ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಸನ್ ನೆಕ್ಸ್ಟ್ ಅಲ್ಲಿಯೇ ಯುಐ ಚಿತ್ರದ ಸ್ಟ್ರೀಮಿಂಗ್ ಆಗುತ್ತದೆ. ಆದಷ್ಟು ಬೇಗ ಇದು ಬರುತ್ತದೆ ಅನ್ನೋ ಸುದ್ದಿ ಕೇಳಿ ಬಂದಿದ್ದು ಇದಕ್ಕೆ ನಿರ್ಮಾಪಕ ಶ್ರೀಕಾಂತ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಚಿತ್ರ ಯಾವ ನೆಟ್ವರ್ಕ್ ಅಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಯಾವ ಸಂಸ್ಥೆಗೆ ಯುಐ ಚಿತ್ರ ಹೋಗಿದೆ. ಈ ರೀತಿಯ ಎಲ್ಲ ಮಾಹಿತಿಯನ್ನ ಅಧಿಕೃತವಾಗಿಯೇ ನಾವೇ ಕೊಡುತ್ತೇವೆ. ಸೋಷಿಯಲ್ ಮೀಡಿಯಲ್ಲಿ ಸದ್ಯ ಹರಿದಾಡುತ್ತಿರೋದು ಸುಳ್ಳು ಸುದ್ದಿನೇ ಆಗಿದೆ ಅಂತಲೇ ಕೆ.ಪಿ.ಶ್ರೀಕಾಂತ್ ಹೇಳಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಯುಐ ಸಿನಿಮಾ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಯುಐ ಚಿತ್ರಕ್ಕೆ ಪರಭಾಷೆಯಲ್ಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಸೆಲೆಬ್ರಿಟಿಗಳು ಉಪ್ಪಿ ನಿರ್ದೇಶನಕ್ಕೆ ಮತ್ತೊಮ್ಮೆ ಫಿದಾ ಆಗಿದ್ದಾರೆ.