ಬಾಗಲಕೋಟೆ: ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ.
Prahlad Joshi: ಸಿದ್ದರಾಮಯ್ಯ ಬೇಜಾವ್ದಾರಿಯಾಗಿ ಮಾತನಾಡುತ್ತಿದ್ದಾರೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಿವದಾಶಿಮಯ್ಯ ಸಮುದಾಯ ಭವನದಲ್ಲಿ ಜರುಗಿದ ಎಂ. ವಿ. ಪಟ್ಟಣ ಪ್ರೌಢಶಾಲೆಯ ೨೯೯೮-೯೯ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮದ ಸಾನಿಧ್ಯ ಮಹಿಸಿ ಅವರು ಮಾತನಾಡಿದರು.
ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಷೇಶ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಕರೋನಾ ನಂತರದ ದಿನಗಳಲ್ಲಿ ತುಂಬಾ ಬದಲಾಗಿದೆ, ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿಯಾದರೇ, ಇನ್ನೊಂ ದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.
ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ, ಡಿ. ಕೆ ಅರಬಳ್ಳಿ ಶಿಕ್ಷಣದಿಂದ ಮಕ್ಕಳು ವಂಚಿತರಾದಲ್ಲಿ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ, ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ಥಂಭವಾಗಿದ್ದು ಅದನ್ನು ಪಡೆದ ವ್ಯಕ್ತಿಗಳು ದೇಶಕ್ಕಾಗಿ ವಿನಿಯೋಗಿಸಬೇಕು ಅಂದಾಗ ಮಾತ್ರ ಸರ್ಕಾರದ ಉದ್ದೇಶಗಳು ಈಡೇರಲು ಸಾಧ್ಯವೆಂದರು.
ರಬಕವಿ ನಗರದ ಬಸ್ ನಿಲ್ದಾಣದಿಂದ ಸಮಾರಂಭದ ಮಂಟಪದವರೆಗೂ ಶಿಕ್ಷಕರನ್ವು ಮೆರವಣಿಗೆ ಮೂಲಕ ಕರೆತಂದಿದ್ದು ಸಂತಸ ತಂದಿದೆ ಎಂದರು
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಎಂ, ವೈ, ರಾಮದುರ್ಗ, ಸಿ, ಎಂ, ಸಾಬೋಜಿ, ಎಂ. ಎಚ್. ಕವಿಶೆಟ್ಟಿ, ಎಂ. ಕೆ. ಹಿರೇಮಠ, ಸಿ. ಜಿ. ಹಳೆಮನಿ, ಎಸ್. ಟಿ. ಗೋಠೆ, ಯು. ಐ. ಹನಗಂಡಿ, ಎನ್. ಡಿ. ದಾನವಾಡಕರ, ವೈ. ಆರ್. ವಾಜಂತ್ರಿ, ಬಿ. ಜಿ. ದುಂಬಾಳಿ, ಆರ್. ಎಸ್. ಬೆಲ್ಲಮ ಸೇರಿದಂತೆ 1998 99 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ