ಬೆಂಗಳೂರು:- ಸರ್ಕಾರವು ತಮ್ಮ ವಾಹನಗಳ HSRP ಪ್ಲೇಟ್ ಮಾಡಿಸಲು ಫೆಬ್ರವರಿ 17ರಂದು ಕೊನೆಯ ದಿನಾಂಕ ನಿಗದಿಪಡಿಸಿದೆ.
ಸರ್ಕಾರ ತಂದಿರುವ ಈ ನಿಯಮ ಈಗಾಗಲೇ ಕೆಲವು ರಾಜ್ಯಗಳಲ್ಲಿ ಜಾರಿಗೆ ಬಂದಿವೆ. ಅದರ ನಡುವೆ HSRP ನಂಬರ್ ಪ್ಲೇಟ್ ಮಾಡಿಸಲು ಕಾರಿಗೆ ಎಷ್ಟು, ಬೈಕ್ಗೆ ಎಷ್ಟು, ಲಾರಿಗೆ ಎಷ್ಟು ಬೆಲೆ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಹುಟ್ಟಿಕೊಂಡಿವೆ.
ಈ ಹೊಸ HSRP ಪ್ಲೇಟ್ಗೆ ಸರ್ಕಾರ ಒಂದು ಬೆಲೆ ಕೂಡಾ ನಿಗದಿ ಮಾಡಿದೆ. ಇದನ್ನು ನೀವು ಮಾಡಿಸ್ಕೊಳ್ಳಬೇಕು ಅಂದ್ರೆ ನಿಮ್ಮ ಹತ್ತಿರದ ಡಿಜಿಟಲ್ ಸೇವಾ ಕೇಂದ್ರ, ಅಥವಾ ನಿಮ್ಮ ಕಂಪ್ಯೂಟರ್ಗಳಲ್ಲಿ ಕೂಡಾ ಮಾಡಿಕೊಳ್ಳಬಹುದಾಗಿದೆ. ಟೂವೀಲರ್ ಅಂದ್ರೆ ಬೈಕ್ಗೆ 450 ರೂಪಾಯಿಯಿಂದ 550 ರೂಪಾಯಿವರೆಗೆ ಸರ್ಕಾರ ದರ ನಿಗದಿ ಮಾಡಿದೆ.
ಹಾಗೆಯೇ ಆಟೋ ಅಥವಾ ಮೂರು ಚಕ್ರದ ವಾಹನಗಳಿಗೆ 450 ರೂ.ಗಳಿಂದ 550 ರೂ.ಗಳವರೆಗೆ ನಿಗದಿ ಮಾಡಲಾಗಿದೆ. ಕಾರು ಅಥವಾ 4 ಚಕ್ರದ ವಾಹನಗಳಿಗೆ 650 ರೂ.ಗಳಿಂದ 780 ರೂ.ಗಳ ವರೆಗೆ ಸರ್ಕಾರ ದರ ನಿಗದಿ ಮಾಡಿದೆ. ಲಾರಿ, ಬಸ್ಸು ಮತ್ತು 10 ಚಕ್ರದ ವಾಹನಗಳಿಗೆ 650 ರೂ.ಗಳಿಂದ 800 ರೂಪಾಯಿವರೆಗೆ ಸರ್ಕಾರ ನಿಗದಿ ಮಾಡಿದೆ.
ಒಟ್ಟಿನಲ್ಲಿ ಸರ್ಕಾರ ನಿಗದಿ ಮಾಡಿರುವ ಹಣದ ವಿಚಾರವಾಗಿ ಸಾರ್ವಜನಿಕರು ಮೋಸ ಹೋಗದೇ ನಿಗದಿತ ದರದಲ್ಲೇ HSRP ನಂಬರ್ ಪ್ಲೇಟ್ ಮಾಡಿಸಿಕೊಳ್ಳಬಹುದಾಗಿದೆ.