ವಿಜಯಪುರ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮಮಂದಿರ ಟ್ರಸ್ಟ್ ಆಹ್ವಾನ ಮಾಡಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಿರುದ್ಧ ಯತ್ನಾಳ್, “ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ ದೇಶದ ಬಗ್ಗೆ ಕಳಕಳಿ ಇದ್ದರೆ ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ.
CET Exam 2024-25: ಏಪ್ರಿಲ್ 20, 21 ರಂದು ಸಿಇಟಿ ಪರೀಕ್ಷೆ ಜನವರಿ 10 ರಿಂದ ಅರ್ಜಿ ಸಲ್ಲಿಕೆ ಆರಂಭ
ಸೋನಿಯಾ ರಾಮ ಮಂದಿರಕ್ಕೆ ಬರೋದು ಓಟಿಗಾಗಿ ಅನ್ನೋದನ್ನ ಮರೀಬೇಡಿ. ಅಕಸ್ಮಾತ್ ಅವರಿಗೆ ಸಾಬರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ’’ ಎಂದು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಮನದ ಮಾತುಗಳನ್ನು ಹೊರಹಾಕಿದರು.