ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿಯನ್ನು ಲಕ್ಷ್ಮಿ ದೇವಿಯ ಇನ್ನೊಂದು ರೂಪವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿಯನ್ನ ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿನ ಕಷ್ಟಗಳು ನಿವಾರಣೆ ಆಗುತ್ತದೆ. ಆದರೆ ತುಳಸಿ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನ ಪಾಲಿಸಬೇಕಾಗುತ್ತದೆ. ನಾವು ಈ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಆ ನಿಯಮಗಳೇನು ಎಂಬುದು ಇಲ್ಲಿದೆ.
ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಖಾಕಿ ಗನ್: ರೌಡಿಶೀಟರ್ ಕಾಲಿಗೆ ಫೈರಿಂಗ್!
ತುಳಸಿ ಗಿಡವು ಪ್ರತಿ ಹಿಂದೂ ಧರ್ಮೀಯರ ಮನೆಯ ಅಂಗಳವನ್ನು ಅಲಂಕರಿಸುತ್ತದೆ. ಮನೆಯಲ್ಲಿ ತುಳಸಿ ಮರ ಇರುವುದು ಯಾವಾಗಲೂ ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ. ಹಿಂದೂ ನಂಬಿಕೆಗಳಲ್ಲಿ, ತುಳಸಿ ಸಸ್ಯವನ್ನು ಪ್ರಾಚೀನ ಕಾಲದಿಂದಲೂ ವಿಷ್ಣು ಪ್ರಿಯಾ ಎಂದು ಪೂಜಿಸಲಾಗುತ್ತದೆ.
ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ಧನಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಇದು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಉತ್ತಮ ಆರೋಗ್ಯ ನೀಡುತ್ತದೆ. ಹಾಗಾಗಿ ಈ ಗಿಡ ಬಹಳ ಮುಖ್ಯ ಎನ್ನಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ವಿಷ್ಣುವಿಗೆ ತುಳಸಿ ಗಿಡ ಎಂದರೆ ತುಂಬಾ ಇಷ್ಟವಾಗುತ್ತದೆ. ಅದಕ್ಕಾಗಿಯೇ ವಿಷ್ಣು ಪೂಜೆಯ ಸಮಯದಲ್ಲಿ ತುಳಸಿ ಎಲೆಗಳನ್ನು ಬಳಕೆ ಮಾಡಲಾಗುತ್ತದೆ. ತುಳಸಿಯಿಂದ ಅಲಂಕಾರ ಮಾಡಲಾಗುತ್ತದೆ. ಇದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ.
ಇನ್ನು ನೀವು ತುಳಸಿಯನ್ನ ವಿವಿಧ ಪೂಜೆಗಳಲ್ಲಿ ತಪ್ಪದೇ ಬಳಕೆ ಮಾಡಬೇಕು. ಮುಖ್ಯವಾಗಿ ಹನುಮಂತನ ಪೂಜೆಯನ್ನ ಮಾಡುವಾಗ ತುಳಸಿಯನ್ನ ಬಳಸಿದರೆ ಅದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
ಮನೆಯಲ್ಲಿ ತುಳಸಿಯನ್ನ ಯಾವುದ್ಯಾವುದೋ ದಿಕ್ಕಿಗೆ ಇಡಬಾರದು. ತಪ್ಪು ದಿಕ್ಕಿಗೆ ಇಟ್ಟರೆ ಅದರಿಂದ ವಾಸ್ತು ದೋಷ ಉಂಟಾಗುತ್ತದೆ. ಹಾಗಾಗಿ ವಾಸ್ತು ದೋಷದಿಂದ ಪರಿಹಾರಬೇಕು ಎಂದರೆ ತುಳಸಿ ಗಿಡವನ್ನು ಆಗ್ನೇಯದಿಂದ ವಾಯುವ್ಯ ದಿಕ್ಕಿಗೆ ಇಡಬೇಕು.
ಕೆಲವು ಸಲಎಷ್ಟೇ ಆರೈಕೆ ಮಾಡಿದರೂ ತುಳಸಿ ಗಿಡ ಒಣಗಿ ಹೋಗುತ್ತದೆ. ಈ ರೀತಿ ತುಳಸಿ ಒಣಗಿದರೆ ಕೆಟ್ಟ ಶಕ್ತಿಗಳು ಸಮಸ್ಯೆಯನ್ನ ಹೆಚ್ಚು ಮಾಡುತ್ತದೆ ಎನ್ನಲಾಗುತ್ತದೆ. ಇದರಿಂದ ಕುಟುಂಬದಲ್ಲಿ ದೊಡ್ಡ ಬಿಕ್ಕಟ್ಟು ಉಂಟಾಗಬಹುದು.
ತುಳಸಿಯನ್ನು ಎಂದಿಗೂ ಅಪ್ಪಿ-ತಪ್ಪಿ ನೆಲದ ಮೇಲೆ ನೆಡಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಇದರಿಂದ ನಿಮ್ಮ ಮನೆಯಲ್ಲಿ ಸಾಲು ಸಾಲು ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗಾಗಿ ಇದನ್ನ ಪಾಟ್ನಲ್ಲಿ ಇಡುವುದು ಬಹಳ ಒಳ್ಳೆಯದು.