ಪಿತೃ ಪಕ್ಷವನ್ನು ಪಿತ್ರಿ ಪಕ್ಷ ಅಥವಾ ಶ್ರಾದ್ಧ ಪಕ್ಷವೆಂದೂ ಕರೆಯುತ್ತಾರೆ. 15 ದಿನಗಳ ಈ ಅವಧಿಯು ನಮ್ಮ ಪಿತೃಗಳಿಗೆ ಗೌರವವನ್ನು ಸಲ್ಲಿಸುವ ಮತ್ತು ಅವರನ್ನು ಪೂಜಿಸುವ ಅವಧಿಯಾಗಿದೆ. ಪಿತೃ ಪಕ್ಷವು ಭಾದ್ರಪದ ಪೂರ್ಣಿಮಾ ದಿನದಿಂದ ಆರಂಭವಾಗಿ, ಭಾದ್ರಪದ ಅಮಾವಾಸ್ಯೆಯ ದಿನದಂದು ಮುಕ್ತಾಯಗೊಳ್ಳುವುದು. 2024 ರಲ್ಲಿ ಪಿತೃ ಪಕ್ಷವು ಸೆಪ್ಟೆಂಬರ್ 17 ರಂದು ಮಂಗಳವಾರದಿಂದ ಪ್ರಾರಂಭವಾಗುವುದು ಮತ್ತು 2024 ರ ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳುವುದು.
ಈ ದಿನವು ಹಿಂದೂ ಕ್ಯಾಲೆಂಡರ್ನಲ್ಲಿ ಅತ್ಯಂತ ಮಂಗಳಕರವಾದ ಅವಧಿಯಾಗಿದೆ. ಪಿತೃ ಪಕ್ಷವು ಪಿತೃಗಳಿಗೆ ತರ್ಪಣವನ್ನು ಅರ್ಪಿಸಿ ಗೌರವವನ್ನು ಸಲ್ಲಿಸುವ 15 ದಿನಗಳ ಅವಧಿಯಾಗಿದ್ದು, ಈ ಸಮಯದಲ್ಲಿ ಪಿತೃಗಳು ತಮ್ಮ ಕುಟುಂಬವನ್ನು ಬೇಟಿಯಾಗಲು ಯಾವುದೋ ಒಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ. ಇನ್ನು ಈ ಪಿತೃಪಕ್ಷದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು? ಮಾಡಿದರೆ ಯಾವ ದೋಷ ಉಂಟಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪೂರ್ವಜರ ಭಾವಚಿತ್ರ ದೇವರ ಫೋಟೋ ಜೊತೆ ಇಡುವುದು
ಹಲವರ ಮನೆಯಲ್ಲಿ ಪೂರ್ವಜರ ಫೋಟೋವನ್ನು ದೇವರ ಫೋಟೋಗಳ ಜೊತೆ ಹಾಗೂ ದೇವರ ಕೋಣೆಯಲ್ಲಿ ಇಡುವುದನ್ನು ನಾವು ನೋಡಿರುತ್ತೇವೆ. ಆದರೆ ಈ ರೀತಿ ಮಾಡಬಾರದು. ಅದರಲ್ಲೂ ಈ ಪಿತೃ ಪಕ್ಷದಲ್ಲಿ ಪೂಜೆ ಮಾಡುವ ದಿನದಂದು ಈ ರೀತಿ ತಪ್ಪು ಮಾಡಬಾರದು. ಹಾಗೆ ಪೂರ್ವಜರ ಫೋಟೋವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬೇಕು. ಬೇರೆ ದಿಕ್ಕಿನೆಡೆಗೆ ಇಡಬಾರದು ಎಂದು ಹೇಳಲಾಗಿದೆ.
ಕಾಗೆಗೆ ಆಹಾರ ನೀಡದೆ ಇರುವುದು
ಈ ದಿನ ಪೂರ್ವಜರಿಗೆ ಪೂಜೆ ಸಲ್ಲಿಸಿದ ಬಳಿಕ ಅವರ ಇಷ್ಟದ ಆಹಾರ ಖಾದ್ಯಗಳ ಮಾಡಿರುತ್ತಾರೆ. ಹೀಗಾಗಿ ಈ ದಿನ ಗೋವುಗಳಿಗೆ, ಪಕ್ಷಿಗಳಿಗೆ ಮುಖ್ಯವಾಗಿ ಕಾಗೆಗೆ ಆಹಾರ ನೀಡಬೇಕು. ಅಪ್ಪಿತಪ್ಪಿಯೂ ಈ ಕೆಲಸ ಮಾಡುವುದನ್ನು ನೀಡು ಮರೆಯಬಾರದಂತೆ. ಕಾಗೆಗಳಿಗೆ ಆಹಾರ ನೀಡಿದರೆ ಪೂರ್ವಜನರ ಆಶೀರ್ವಾದ ಲಭಿಸಲಿದೆ ಎಂದು ನಂಬಲಾಗಿದೆ.
ಪಿತೃ ಪಕ್ಷದಲ್ಲಿ ಈ ಆಹಾರ ಸೇವಿಸಬೇಡಿ
ಪಿತೃ ಪಕ್ಷದ ಸಮಯದಲ್ಲಿ ತಾಮಸಿಕ ಆಹಾರವನ್ನು ಸೇವಿಸಬೇಡಿ. ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಿ. ಮೂಂಗ್ ದಾಲ್ ಅನ್ನು ತಿನ್ನಿರಿ, ಏಕೆಂದರೆ ಇದನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಸೂರ್ ದಾಲ್ ತಿನ್ನಬಾರದು. ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಾಂಸ, ಮೀನು, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸಿ.
ಮನೆಗೆ ಬಂದವರನ್ನು ಸತ್ಕರಿಸಿ
ಈ ಸಮಯದಲ್ಲಿ, ಯಾವುದೇ ಭಿಕ್ಷುಕ ಅಥವಾ ಯಾವುದೇ ಪ್ರಾಣಿಯು ನಿಮ್ಮ ಮನೆಯ ಮುಂದೆ ಬಂದರೆ, ಅವುಗಳನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ಅಲ್ಲದೆ, ಯಾರಾದರೂ ನಿಮ್ಮ ಬಳಿ ಸಹಾಯ ಕೇಳಿದರೆ, ಸಾಧ್ಯವಾದಷ್ಟು ಸಹಾಯ ಮಾಡಿ. ಈ ದಿನಗಳಲ್ಲಿ ಪೂರ್ವಿಕರು ನಿಮ್ಮ ಮನೆಗೆ ಯಾವುದೇ ರೂಪದಲ್ಲಿ ಬರಬಹುದು ಎನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ಮನೆಬಾಗಿಲಿಗೆ ಬಂದ ಜೀವರಾಶಿಗಳನ್ನು ಸಂತೃಪ್ತಿಗೊಳಿಸಿ. ಇದರಿಂದ ಪೂರ್ವಜರ ಕೃಪೆ ನಿಮ್ಮ ಮೇಲಿರುತ್ತದೆ.
ಈ ತಪ್ಪುಗಳನ್ನು ಮಾಡಬೇಡಿ
ಪೋಷಕರಲ್ಲಿ ಯಾರಾದರೂ ಒಬ್ಬರು ಜೀವಂತವಾಗಿದ್ದರೆ, ಅವರಿಗೆ ಸಾಧ್ಯವಾದಷ್ಟು ಗೌರವವನ್ನು ನೀಡಿ. ಅವರ ಸಂತೋಷವನ್ನು ನೋಡಿಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ಪರಲೋಕಕ್ಕೆ ಹೋದ ತಂದೆ-ತಾಯಿಗಳು ಭೂಮಿಗೆ ಬಂದು ಬದುಕಿರುವ ತಾಯಿ ಅಥವಾ ತಂದೆಯ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನೋಡುತ್ತಾರೆ. ಸಂಗಾತಿಯು ನರಳಿದರೆ, ಅವರ ಮನಸ್ಸು ನರಳುತ್ತದೆ. ಅವರು ಆಹಾರ ಮತ್ತು ನೀರು ಸಿಗದೆ ಶಪಿಸುತ್ತಾರೆ ಮತ್ತು ಹಿಂತಿರುಗುತ್ತಾರೆ, ಇದರಿಂದಾಗಿ ಜೀವನದಲ್ಲಿ ಒಂದರ ನಂತರ ಒಂದರಂತೆ ತೊಂದರೆಗಳು ಬರಲು ಪ್ರಾರಂಭಿಸುತ್ತವೆ. ಪ್ರಗತಿ ನಿಲ್ಲುತ್ತದೆ.
ಮನೆಯ ದ್ವಾರದಲ್ಲಿ ದೀಪ ಹಚ್ಚಿ
ಪಿತೃ ಪಕ್ಷದ ಸಮಯದಲ್ಲಿ, ನೀವು ಪೂರ್ವಜರ ಸಲುವಾಗಿ ಪ್ರತಿದಿನ ನಿಮ್ಮ ಮನೆಯ ದ್ವಾರದಲ್ಲಿ ದೀಪವನ್ನು ಹಚ್ಚಬೇಕು. ಪಿತೃ ಪಕ್ಷದ ಸಮಯದಲ್ಲಿ ಮನೆಯಲ್ಲಿ ಅಪಶ್ರುತಿ ಮತ್ತು ಅಶಾಂತಿಯ ವಾತಾವರಣವನ್ನು ಸೃಷ್ಟಿಸಲು ಬಿಡಬೇಡಿ. ಏಕೆಂದರೆ ಪೂರ್ವಜರ ಶಾಪ ಅವರ ಸಂತೋಷವನ್ನು ಕಸಿದುಕೊಳ್ಳುತ್ತದೆ.
ದೂರ ಪ್ರಯಾಣ ಮಾಡಬೇಡಿ
ಪಿತೃಪಕ್ಷದ ಸಮಯದಲ್ಲಿ ದೂರ ಪ್ರಯಾಣ ಮಾಡಬಾರದು. ಪೂರ್ವಜರು ಯಾವ ಸ್ಥಳದಲ್ಲಿ ಪೂರ್ವಜರಿಗೆ ತರ್ಪಣವನ್ನು ಮತ್ತು ಪಿಂಡದಾನ ನೀಡಲು ಪ್ರಾರಂಭಿಸಿದ್ದಿರೋ ಅದೇ ಸ್ಥಳದಲ್ಲಿ ಸಂಪೂರ್ಣ ಉಳಿದುಕೊಂಡು ಪೂರ್ವಜರಿಗೆ ತರ್ಪಣ ನೀಡಬೇಕು. ನೀವು ಪ್ರಯಾಣ ಮಾಡಿದರೆ, ಪೂರ್ವಜರು ಸಹ ದಾರಿ ತಪ್ಪಬೇಕಾಗುತ್ತದೆ ಮತ್ತು ಇದರಿಂದ ಅವರು ಬಳಲುತ್ತಾರೆ ಎಂದು ಹೇಳಲಾಗುತ್ತದೆ.