ಚಿಕ್ಕಬಳ್ಳಾಪುರ: ವಕ್ಫ ಬೋರ್ಡ್ ಅಕ್ರಮವಾಗಿ ಕಬಳಿಸಿರುವ ರೈತರ ಜಮೀನನ್ನು ಸರ್ಕಾರ ವಾಪಸ್ ರೈತರಿಗೆ ಮರಳಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ರ್ಯಾಲಿ ನಡೆಸಿದ್ದು, ತಹಶಿಲ್ದಾರ್ ಬಿಎನ್ ಸ್ವಾಮಿ ಗೆ ಮನವಿ ಸಲ್ಲಿಸಿ, ಬಿಜೆಪಿ ಮುಖಂಡ ಶೀಕಲ್ ರಾಮಚಂದ್ರ ಗೌಡ ಮಾತನಾಡಿದ್ದಾರೆ. ರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.