ದಾವಣಗೆರೆ:– BR Patil ರಾಜೀನಾಮೆ ಪತ್ರದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ,ಶಾಸಕ ಬಿ.ಆರ್.ಪಾಟೀಲ್ ಯಾವ ಕಾರಣಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಯಾವ ಕಾರಣಕ್ಕೆ ಎಂಬುದನ್ನ ಅವರನ್ನೇ ಕೇಳಬೇಕು ಎಂದರು.
ಶಾಸಕ ಬಿ.ಆರ್.ಪಾಟೀಲ್ ಯಾವ ಕಾರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಯಾವ ಸಚಿವರು ಸ್ಪಂದಿಸುತ್ತಿಲ್ಲವೆ ಎಂಬುದನ್ನ ಅವರೇ ಬಹಿರಂಗವಾಗಿ ಹೇಳಲಿ. ಯಾವ ಸಚಿವರು, ಎಲ್ಲಾ ಸಚಿವರಾ, ಇಂತಹವರೇ ಎಂಬುದನ್ನ ಹೇಳಬೇಕು ಎಂದು ತಿಳಿಸಿದರು. ಬಿ.ಆರ್. ಪಾಟೀಲ್ ಅವರಿಗೆ ಏನು ಸಮಸ್ಯೆ ಅಂತಾ ಸಂಬಂಧಪಟ್ಟ ಸಚಿವರು ಅಥವಾ ಮುಖ್ಯಮಂತ್ರಿಯವರ ಬಳಿ ಚರ್ಚಿಸಬೇಕು ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಇದ್ದಿದ್ದರೆ ಹೇಳಬಹುದಿತ್ತು.ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾತಿಗಣತಿ ವರದಿ ಮೊದಲು ಬಿಡುಗಡೆಯಾದ ನಂತರ ಚರ್ಚೆ ಮಾಡಬಹುದು. ವರದಿ ಬಿಡುಗಡೆಯೇ ಆಗದಿ ದ್ದಾಗ ಅದರ ಬಗ್ಗೆ ಬೇರೆ ರೀತಿಯ ಹೇಳಿಕೆಗಳನ್ನು ನೀಡುವುದಲ್ಲ. ಯಾವುದೇ ವರದಿಗೆ ಪರ ವಿರೋಧ ಇದ್ದೇ ಇರುತ್ತದೆ. ವರದಿ ಬಗ್ಗೆ ಯಾರಿಗೇ ವಿರೋಧವಿದ್ದರೂ ಸಂಪುಟ ಸಭೆಯಲ್ಲಿ ತಿಳಿಸಲಿ ಎಂದರು.