ಗದಗ:- ಜಾತಿಯ ಹೆಸರಿನಲ್ಲಿ ರಕ್ಷಣೆ ತೆಗೆದುಕೊಳ್ಳಲು ಹೋಗಬೇಡಿ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.
ಕೆ.ಆರ್.ಪುರ: ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳ ವರದಾನ: ಡಾ.ಹೆಚ್ ಎಂ.ಚಂದ್ರಶೇಕರ್ !
ಇಂದು ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಆಗಮಿಸಿದ ಪ್ರಹ್ಲಾದ ಜೋಶಿ ಅವರು ಫಕೀರೇಶ್ವರ ಕತೃ ಗದ್ದುಗೆಗೆ ಪೋಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡು ಮಾತನಾಡಿದರು.
ತಪ್ಪು ಮಾಡಿಲ್ಲ ಅಂದ್ರೆ ಸಿದ್ದರಾಮಯ್ಯ ಅವರಿಗೆ ಭಯ ಏಕೆ?. ಮೊದ್ಲು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮತ್ತೊಬ್ಬರನ್ನ ಸಿಎಂ ಮಾಡಿ. ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗೆ ಇಲ್ಲ. ಇದು ನನ್ನ ಹಾಗೂ ನಮ್ಮ ಪಕ್ಷದ ಸ್ಪಷ್ಟ ಅಭಿಪ್ರಾಯವಾಗಿದೆ. ರಾಜ್ಯದ ಜನ ಕಾಂಗ್ರೆಸ್ಗೆ 136 ಸ್ಥಾನ ನೀಡಿದ್ದಾರೆ. ನಾವು ಸರ್ಕಾರ ಬೀಳಿಸುವ ಯಾವ ಪ್ರಯತ್ನವನ್ನೂ ಮಾಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ತಪ್ಪು ಮಾಡಿ ಜಾತಿ ಹೆಸರಲ್ಲಿ ರಕ್ಷಣೆ ಪಡೆಯಬೇಡಿ. ತನಿಖೆ ಆಗೋವರೆಗೆ ಇನ್ಮೊಬ್ಬ ಒಬಿಸಿ ಸಿಎಂ ನೇಮಿಸಿ. ರಾಜೀನಾಮೆ ನೀಡಿದ್ರೆ ಮೂಲೆ ಗುಂಪಾಗುವ ಭಯ ಸಿದ್ದರಾಮಯ್ಯಗೆ ಇದೆನಾ?. ಪರಮೇಶ್ವರ ಅವರನ್ನು ಯಾರು ಸೋಲಿಸಿದ್ರು ಅಂತ ಕೆದಕಿದ್ದಾರೆ.
ಮತ್ತೆ ಎಸ್ಸಿ, ಎಸ್ಟಿ, ಒಬಿಸಿ ಅಂತ ಮಾತಾಡ್ತೀರಿ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಸಚಿವ ಪ್ರಹ್ಲಾದ್ ಜೋಶಿ ಅವರು, ಮುಡಾ, ವಾಲ್ಮೀಕಿ ಹಗರಣ ಆಗಿದೆ. ಅವ್ರೇ ಹೇಳಿದ್ದಾರೆ 189 ಕೋಟಿ ಅಲ್ಲ, 89 ಕೋಟಿ ಅಂತ. SCP, TSP ಹಣ ಎಲ್ಲಿ ತಗೊಂಡು ಹೋಗಿರಿ. ಗ್ಯಾರಂಟಿ ಕೊಡುವಾಗ ಎಸ್ಸಿ, ಎಸ್ಟಿ ಹಣ ಬಳಕೆ ಮಾಡ್ತೀವಿ ಅಂತ ಹೇಳಿದ್ರಾ?. ಗ್ಯಾರಂಟಿಗೆ ಕೊಟ್ರೆ ಅದು ಎಸ್ ಸಿ ಎಸ್ಟಿಗೆ ಮಾತ್ರ ಹೋಗ್ತಾವಾ. ಭೋಗಸ್ ಸಂಗತಿಗಳು ಸಿಎಂ ಮಾತಾಡ್ತಾಯಿದ್ದಾರೆ. ಸಿಎಂ ತಪ್ಪು ಮಾಡಿದ್ದಾರೆ. ಭಯಕಾಡ್ತಾಯಿದೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ರಾಜ್ಯಪಾಲರು ಪ್ರಾಸಿಕ್ಯೂಕುಷನ್ ಗೆ ಅನುಮತಿ ಕೊಡದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕುಮಾರಸ್ವಾಮಿ ಪ್ರಕರಣ 2005-06ರಿಂದಲೇ ನಡೆದಿದೆ. 2013 ರಲ್ಲಿ ನಿಮ್ಮದೇ ಸರ್ಕಾರ ಇತ್ತು. 2018 ರಲ್ಲಿ ನೀವೇ ಕುಮಾರಸ್ವಾಮಿ ಕರೆತಂದು ಸಿಎಂ ಮಾಡಿದ್ರಿ. ಯಾರಿಗೆ ಕಥೆ ಹೇಳ್ತಿದ್ದೀರಾ, ಜನ ಎಲ್ಲಾ ಮರೆತಿದ್ದೀರೆಂದು ತಿಳಿದಿದ್ದೀರಾ?. ಅಂದು ಯಾವಾಗ ಕ್ರಮ ಕೈಗೊಂಡ್ರಿ ಹೇಳಿ. ಅವರ ಮೇಲೆ ಕ್ರಮ ಕೈಗೊಳ್ಳದೇ ಅತೀ ಹೆಚ್ಚು ಸೀಟು ಗೆದ್ದವರು ನೀವು. ಅಂದು ಕಡಿಮೆ ಸೀಟು ಗೆದ್ದ ಕುಮಾರಸ್ವಾಮಿ ಕರೆತಂದು ಸಿಎಂ ಮಾಡಿದ್ರಿ. ಇವಾಗ ನಮ್ಮನ್ನು ಕೇಳ್ತಿದ್ದೀರಾ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.