ಉಡುಗೊರೆ ನೀಡೋದು, ಉಡುಗೊರೆ ಪಡೆಯೋದು ಭಾರತೀಯರಿಗೆ ಹೊಸದಲ್ಲ. ಇದು ಭಾರತದ ಸಂಸ್ಕೃತಿ ಯಲ್ಲಿ ಬಂದಿದೆ. ನಾವು ಅನೇಕ ಸಂದರ್ಭಗಳಲ್ಲಿ ಉಡುಗೊರೆಯನ್ನು ನೀಡ್ತೇವೆ. ಆದರೆ ಉಡುಗೊರೆಯ ಮೌಲ್ಯ ಮತ್ತು ಸ್ವರೂಪವನ್ನು ಅವಲಂಬಿಸಿ ಇದಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಅದನ್ನು ಕಾನೂನಿನ ಪರಿಧಿಯೊಳಗೆ ತಂದು ಅದರ ಸಿಂಧುತ್ವವನ್ನು ನಿರ್ಧರಿಸಲಾಗುತ್ತದೆ.
ಅದರಲ್ಲೂ ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಅನುಗುಣವಾಗಿ ಗಿಫ್ಟ್ ನೀಡುವುದು ಉತ್ತಮ. ಉಡುಗೊರೆಗಳು ನಿಮ್ಮ ಸಂಬಂಧದ ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ ವಾಸ್ತು ಪ್ರಕಾರ, ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಎಂದು ತಿಳಿಯೋಣ.
ಚೂಪಾದ ವಸ್ತುಗಳು
ಮನೆ ಬಳಕೆಯ ಚಾಕು, ಕತ್ತಿ ಸೇರಿದಂತೆ ಯಾವುದೇ ರೀತಿಯ ಚೂಪಾದ ಅಥವಾ ಮೊನಚಾದ ತುದಿಯನ್ನು ಹೊಂದಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಗಿಫ್ಟ್ ಮಾಡಬಾರದು. ಇವು ನೆಗೆಟಿವ್ ಎನರ್ಜಿಯನ್ನು ಉಂಟುಮಾಡುತ್ತವೆ. ಏಕತೆ ಮತ್ತು ಧನಾತ್ಮಕತೆ ಹೆಚ್ಚಿಸುವ ವಸ್ತುಗಳನ್ನೇ ಉಡುಗೊರೆಯಾಗಿ ನೀಡಬೇಕು.
ಕಪ್ಪು ಬಣ್ಣದ ವಸ್ತುಗಳು
ಕಪ್ಪು ಬಣ್ಣಕ್ಕೆ ನಕಾರಾತ್ಮಕ ಸಂಕೇತವಿದೆ. ಹೀಗಾಗಿ, ಕಪ್ಪು ಬಟ್ಟೆ (Cloth) ಸೇರಿದಂತೆ ಕಪ್ಪು ಬಣ್ಣದ ಯಾವುದೇ ವಸ್ತುವನ್ನು ಉಡುಗೊರೆಯನ್ನಾಗಿ ನೀಡಬಾರದು.
ಕ್ಯಾಕ್ಟಿ ಅಥವಾ ಮುಳ್ಳುಗಳನ್ನು ಹೊಂದಿದ ಸಸ್ಯ
ಸಸ್ಯಗಳನ್ನು ಉಡುಗೊರೆಯನ್ನಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಬೇರೆ ಯಾವುದಾದರೂ ಸಸ್ಯಗಳನ್ನು ನೀಡಬಹುದು, ಆದರೆ ಕ್ಯಾಕ್ಟಸ್ ನಂತಹ ಮುಳ್ಳುಗಳನ್ನು ಹೊಂದಿರುವ ಗಿಡಗಳನ್ನು ನೀಡಬಾರದು. ಇವು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ, ಜೀವನದ ಎಲ್ಲ ಹಂತಗಳಲ್ಲೂ ಅಡೆತಡೆಯನ್ನು ಉಂಟುಮಾಡುತ್ತವೆ ಎಂದು ವಾಸ್ತು ಶಾಸ್ತ್ರ ಎಚ್ಚರಿಕೆ ನೀಡುತ್ತದೆ.
ಗಡಿಯಾರ
ಗಡಿಯಾರಗಳನ್ನು ಗಿಫ್ಟ್ ಮಾಡುವುದು ಸರ್ವೇ ಸಾಮಾನ್ಯ. ಆದರೆ, ವಾಸ್ತು ಶಾಸ್ತ್ರದಲ್ಲಿ ಗಡಿಯಾರ ಅಥವಾ ವಾಚ್ (Watch) ಉಡುಗೊರೆಯಾಗಿ ನೀಡುವ ವಸ್ತುಗಳಲ್ಲ. ಇವು ಸಮಯದ ಮಿತಿಯನ್ನು (Time Limit) ಸೂಚಿಸುತ್ತವೆ, ಕೆಲವೇ ಸಮಯವಿದೆ ಎಂದು ಹೇಳುತ್ತವೆ. ಸಮಯದೊಂದಿಗೆ ತಳುಕು ಹಾಕಿಕೊಂಡಿರುವ ಗಡಿಯಾರ ಸಂಬಂಧವನ್ನು (Relation) ಉತ್ತೇಜಿಸುವುದಿಲ್ಲ. ಪ್ರೀತಿ ಮತ್ತು ವೈಚಾರಿಕತೆಯ ಸಂಬಂಧವನ್ನು ಹೆಚ್ಚಿಸಲು, ಮುಂದುವರಿಸಲು ಸಮಯದ ಮಿತಿ ಮೀರಿರುವ ಯಾವುದೇ ವಸ್ತುವನ್ನು ಗಿಫ್ಟ್ ಮಾಡಬಹುದು.
ಇಲೆಕ್ಟ್ರಾನಿಕ್ಸ್ ಗ್ಯಾಜೆಟ್
ಇಲೆಕ್ಟ್ರಾನಿಕ್ಸ್ ಗ್ಯಾಜೆಟ್ ಉಡುಗೊರೆ ನೀಡುವುದು ಸಹ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಮನೆಯಲ್ಲಿ ಇವು ನೈಸರ್ಗಿಕ ಎನರ್ಜಿ ಹರಿವಿಗೆ ಧಕ್ಕೆ ತರುತ್ತವೆ. ಶಾಂತವಾದ ವಾತಾವರಣಕ್ಕೆ ಉತ್ತೇಜನ ನೀಡುವ ವಸ್ತುಗಳನ್ನು ಗಿಫ್ಟ್ ಮಾಡುವುದು ಉತ್ತಮ.
ಕನ್ನಡಿಗಳು
ಕನ್ನಡಿಗಳು ಎನರ್ಜಿ ಹರಿವಿನ ಮೇಲೆ ಗಾಢ ಪ್ರಭಾವ ಬೀರುತ್ತವೆ. ವಾಸ್ತು ಶಾಸ್ತ್ರ ಕನ್ನಡಿಗಳನ್ನು ಮನೆಯಲ್ಲಿ ಎಲ್ಲಾದರೂ ಅಳವಡಿಸಬಾರದು ಎಂದು ಹೇಳುತ್ತದೆ. ಹಾಗೆಯೇ ಇದು ಗಿಫ್ಟ್ ಮಾಡಲು ಯೋಗ್ಯವಾದ ವಸ್ತುವಲ್ಲ. ಕನ್ನಡಿಗಳು ನಕಾರಾತ್ಮಕ ಎನರ್ಜಿಯನ್ನು ಪ್ರತಿಬಿಂಬಿಸುತ್ತವೆ ಹಾಗೂ ದುಪ್ಪಟ್ಟುಗೊಳಿಸುತ್ತವೆ ಎನ್ನಲಾಗುತ್ತದೆ. ಸಂತೋಷ (Joy) ಮತ್ತು ಸಕಾರಾತ್ಮಕತೆ ಹೆಚ್ಚಿಸುವ ವಸ್ತುಗಳನ್ನು ನೀಡುವುದು ಶ್ರೇಯಸ್ಕರ.
ಚರ್ಮದ ವಸ್ತುಗಳು
ಹಲವರು ಪರ್ಸ್, ಬ್ಯಾಗ್ ಇನ್ನಿತರ ಚರ್ಮದ ವಸ್ತುಗಳನ್ನು ಗಿಫ್ಟ್ ಮಾಡುವುದು ಕಂಡುಬರುತ್ತದೆ. ಆದರೆ, ಚರ್ಮದ ವಸ್ತು ಉಡುಗೊರೆ ನೀಡಲು ಯೋಗ್ಯವಲ್ಲ. ಚರ್ಮಕ್ಕೂ ನೆಗೆಟಿವ್ ಎನರ್ಜಿಗೂ ಸಂಬಂಧವಿದೆ.
ಕಲಾತ್ಮಕ ವಸ್ತು
ಪೇಂಟಿಂಗ್, ಶಿಲ್ಪಕಲೆಯಂತಹ ಕಲಾತ್ಮಕ ವಸ್ತುಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಇರಲಿ. ಏಕೆಂದರೆ, ಅವು ನಕಾರಾತ್ಮಕ ಹಾಗೂ ಅಗ್ರೆಸ್ಸಿವ್ ಧೋರಣೆಗೆ ಪ್ರೇರಣೆ ನೀಡಬಲ್ಲವು. ಖುಷಿ ಮತ್ತು ಶಾಂತಿ (Peace) ನೀಡುವ ವಸ್ತುಗಳನ್ನು ಮಾತ್ರ ಆಯ್ಕೆ ಮಾಡಬೇಕು.