ನಾವು ಆಹಾರವನ್ನು ಎಷ್ಟೇ ಆರೋಗ್ಯಕರವಾಗಿಟ್ಟರೂ, ಎಷ್ಟೇ ಆರೋಗ್ಯಕರ ಆಹಾರ ಸೇವಿಸಿದರೂ, ಕೆಲವು ಆಹಾರಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯವನ್ನು ಹಾನಿಗೊಳಿಸುತ್ತದೆ. ಮೊಸರು, ಹಾಲು ಅಥವಾ ಮಾವಿನ ಹಣ್ಣನ್ನು ಕೆಲವು ವಸ್ತುಗಳೊಂದಿಗೆ ತಿನ್ನಬಾರದು ಎಂದು ನೀವು ಅನೇಕ ಬಾರಿ ಕೇಳಿರಬಹುದು. ಮೀನು ಮತ್ತು ಹಾಲನ್ನು ಸಹ ಒಟ್ಟಿಗೆ ಸೇವಿಸಬಾರದು ಎನ್ನುತ್ತಾರೆ, ಅದರ ಬಗ್ಗೆ ನಾವು ಇಂದು ಮಾತನಾಡಲಿದ್ದೇವೆ. ಮನುಷ್ಯನ ದೇಹವು ಯಾರ ರೀತಿಯಲ್ಲಿ ಆಹಾರವನ್ನು ಜೀರ್ಣಗೊಳಿಸುವುದು ಎನ್ನುವುದು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಕೆಲವೊಂದು ಆಹಾರಗಳನ್ನು ಜತೆಯಾಗಿ ಸೇವಿಸಿದರೆ ಅದರಿಂದ ಸಮಸ್ಯೆ ಕಾಣಿಸುವುದು.
Viral News: ಆನ್ಲೈನ್ʼನಲ್ಲಿ ಆರ್ಡರ್ ಮಾಡಿ 6 ವರ್ಷಗಳ ಬಳಿಕ ಫ್ಲಿಪ್ʼಕಾರ್ಟ್ʼನಿಂದ ಬಂತು ಫೋನ್..!
ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮೀನು ತಿಂದ ಬಳಿಕ ಸೇವಿಸಬಾರದು. ಇದರಿಂದಾಗಿ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬರುವುದು. ಹಿಂದಿನಿಂದಲೂ ನಮ್ಮ ಹಿರಿಯರು ಕೆಲವೊಂದು ಆಹಾರಗಳನ್ನು ಜತೆಯಾಗಿ ಸೇವಿಸಬಾರದು ಎನ್ನುವ ಬಗ್ಗೆ ಹೇಳುತ್ತಾ ಬರುತ್ತಿದ್ದಾರೆ. ಆದರೆ ಕೆಲವು ಜನರು ಇದನ್ನು ಕಡೆಗಣಿಸಿರುರು. ಮೀನು ಪ್ರಿಯರು ಮೀನು ತಿಂದ ಬಳಿಕ ಹಾಲು ಕುಡಿಯಬಾರದು.
ಹಾಲು ಮತ್ತು ಮೀನನ್ನು ಜತೆಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಯುರ್ವೇದವು ಕೂಡ ಹೇಳಿದೆ. ಹಾಲು ಸಸ್ಯಾಹಾರಿ ಮತ್ತು ಮೀನು ಮಾಂಸಾಹಾರಿ ಮತ್ತು ಎರಡನ್ನು ಜತೆಯಾಗಿ ಸೇವಿಸಿದರೆ ಅದರಿಂದ ದೇಹದಲ್ಲಿ `ತಮಸ’ಗುಣವು ಹೆಚ್ಚಾಗುವುದು. ಇದು ದೇಹದಲ್ಲಿ ಶಕ್ತಿಯ ಹರಿವಿನ ಮೇಲೆ ತಡೆ ಬೀರುವುದು ಮತ್ತು ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಹಾಲು ದೇಹದಲ್ಲಿ ತಂಪನ್ನು ಉಂಟು ಮಾಡುವುದು. ಅದೇ ಮೀನು ಉಷ್ಣತೆ ಹೆಚ್ಚಿಸುವುದು. ಸ್ವಲ್ಪ ಸಮಯದ ಅಂತರದಲ್ಲಿ ಇದರೆಡನ್ನು ಸೇವಿಸಿದರೆ ಅದು `ವಾತ ದೋಷ’ ಉಂಟು ಮಾಡುವುದು. ಇದರಿಂದ ವಿಟಲಿಗೊ(ಮೈಮೇಲೆ ಬಿಳಿ ಕಲೆ ಬೀಳುವುದು) ಕಾಡಬಹುದು ಎಂದು ಆಯುರ್ವೇದವು ಹೇಳುತ್ತದೆ. ಮೀನು ತಿಂದ ಬಳಿಕ ಹಾಲು ಕುಡಿದರೆ ಅಲರ್ಜಿ ಕೂಡ ಆಗಬಹುದು.
ವೈಜ್ಞಾನಿಕ ಕಾರಣಗಳು ಏನು?
ಮೀನು ಮತ್ತು ಹಾಲು ಸೇವನೆ ಮಾಡಿದರೆ ಅದರಿಂದ ಯಾವುದೇ ರೀತಿಯ ತೊಂದರೆ ಆಗಿರುವ ಬಗ್ಗೆ ಸಾಕ್ಷ್ಯಗಳು ಇಲ್ಲ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಹಾಲು ಮತ್ತು ಮೀನು ಜತೆಯಾಗಿ ಸೇವನೆ ಮಾಡಿದರೆ ಅದರಿಂದ ವಿಟಲಿಗೋ ಅಥವಾ ಲ್ಯುಕೋಡರ್ಮಾ ಎನ್ನುವ ಬಗ್ಗೆ ಗೊಂದಲದಲ್ಲಿದ್ದಾರೆ.
ವಿಟಲಿಗೋ ಚರ್ಮದಲ್ಲಿನ ಮೆಲನೋಸೈಟ್ ಸಾಯುವಂತಹ, ಆಕ್ಸಿಡೇಟಿವ್ ಒತ್ತಡ ಅಥವಾ ಅಟೋಇಮ್ಯೂನ್ ಕಾಯಿಲೆಯ ಪರಿಸ್ಥಿತಿಯಾಗಿದೆ. ಆದರೆ ಮೀನು ಮತ್ತು ಹಾಲಿನಿಂದ ಈ ಪರಿಸ್ಥಿತಿ ಬಂದಿದೆ ಎಂದು ಇದುವರೆಗೆ ಯಾವುದೇ ಅಧ್ಯಯನಗಳು ಹೇಳಿಲ್ಲ.
ಮೀನು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಮೈಮೇಲೆ ಬಿಳಿ ಕಲೆ ಬೀಳುವುದೇ?
ಮೈ ಮೇಲೆ ಬಿಳಿ ಕಲೆಗಳು ಬೀಳುವುದನ್ನು ವಿಟಿಲಿಗೊ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ದೇಹದಲ್ಲಿ ವರ್ಣದ್ರವ್ಯ ಮೆಲನೋಸೈಟ್ ಅಸಮತೋಲನ ಆದ ವೇಳೆ ಕಂಡುಬರುವುದು. ಮೆಲನೋಸೈಟ್ ಮೇಲೆ ಅನುವಂಶೀಯ ಪರಿಸ್ಥಿತಿ ಅಥವಾ ಅಟೋಇಮ್ಯೂನ್ ಕಾಯಿಲೆಗಳು ಪರಿಣಾಮ ಬೀರಬಹುದು.
ಆದರೆ ಇದಕ್ಕೆ ಇದುವರೆಗೆ ಸರಿಯಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ಹಾಲು ಮತ್ತು ಮೀನು ದೇಹದಲ್ಲಿ ಬಿಳಿ ಕಲೆಗಳನ್ನು ಉಂಟು ಮಾಡದು. ಆದರೆ ಮೀನು ಮತ್ತು ಹಾಲನ್ನು ಜತೆಯಾಗಿ ಸೇವಿಸಿದರೆ ಅದರಿಮದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು ಖಚಿತ. ಅಲರ್ಜಿ, ಅತಿಸಾರ ಅಥವಾ ಆಹಾರವು ವಿಷವಾಗುವ ಸಾಧ್ಯತೆಗಳು ಇರುವುದು.