ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಜೊತೆಗೆ ನನ್ನನ್ನು ಹೋಲಿಸುವುದು ಸರಿಯಾದ ಕ್ರಮವಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನಾ ಹೇಳಿದ್ದಾರೆ.
ʼಇದು ಆರ್ಸಿಬಿಯ ಹೊಸ ಅಧ್ಯಾಯʼ: ಕನ್ನಡದಲ್ಲಿಯೇ ಮಾತನಾಡಿದ ವಿರಾಟ್ ಕೊಹ್ಲಿ! Video Viral
ಭಾನುವಾರ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮ್ಯಾಗ್ ಲ್ಯಾನಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಹೋರಾಟ ನಡೆಸಿದ್ದ ಸ್ಮೃತಿ ಮಂಧಾನಾ ಸಾರಥ್ಯದ ಆರ್ಸಿಬಿ 8 ವಿಕೆಟ್ ಗೆಲುವು ಸಾಧಿಸಿದೆ. ಇದರ ನಡುವೆ ಹದಿನೇಳನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿಗೆ ಐಪಿಎಲ್ ಟ್ರೋಫಿ ಗೆದ್ದುಕೊಡುತ್ತಾರೆ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ವತ್ತಿ ಜೀವನದಲ್ಲಿ ಎತ್ತರಕ್ಕೆ ತಲುಪಲು ವಿರಾಟ್ ಕೊಹ್ಲಿ ಅವರೇ ಸ್ಫೂರ್ತಿ. ಅಲ್ಲದೆ 16 ವರ್ಷಗಳ ವೃತ್ತಿ ಜೀವನದಲ್ಲಿ ವಿರಾಟ್ ಕೊಹ್ಲಿ ತಮ್ಮ ಪ್ರದರ್ಶನದಿಂದ ಬಲು ಎತ್ತರಕ್ಕೆ ತಲುಪಿದ್ದಾರೆ ಎಂದು ಆರ್ಸಿಬಿ ನಾಯಕಿ ಹೇಳಿದ್ದಾರೆ.