ದೇವನಹಳ್ಳಿ: ಕಿಯೋ ಕಂಪನಿಯು ಗ್ರಾಹಕನಿಗೆ ಮೋಸ ಮಾಡಿದ್ದು, ಗ್ರಾಹಕ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಕಳ್ಳಾಟವಾಡುತ್ತಿದೆ. ಖಾಸಗಿ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕಾಂತ್, 3 ವರ್ಷದ ಹಿಂದೆ ಹೊಸ ಕಾರು ಖರೀದಿ ಮಾಡಿದ್ದರು. ಯಲಹಂಕ ಕಿಯೋ ಕಾರು ಶೋ ರೂಂನಲ್ಲಿ ಲೋನ್ ನೊಂದಿಗೆ ಕಿಯೋ ಸೋನೆಟ್ ಕಾರು ಖರೀದಿ ಮಾಡಿದ್ದರು. ಆದರೆ ಕಾರು ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಆಯಿಲ್ ಸಮಸ್ಯೆ ಶುರುವಾಗಿದೆ. ಈ ಬಗ್ಗೆ ಕಾರು ಮಾಲೀಕ ರವಿಕಾಂತ್ ಕಿಯೋ ಶೋ ರೂಂ ನಲ್ಲಿ ವಿಚಾರಿಸಿದ್ದರೆ. ಆದರೆ ಈ ಬಗ್ಗೆ ಕಿಯೋ ಶೋ ರೂಂ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಲಭ್ಯವೇ ಇಲ್ಲ : ಕಾರಣ ಏನು ಗೊತ್ತಾ..?
ಇದ್ರಿಂದ ಬೇಸತ್ತ ರವಿಕಾಂತ್ ಗ್ರಾಹಕರ ಕೋರ್ಟ್ ಮೇಟ್ಟಿಲೆರಿದ್ದು, ಕೋರ್ಟ್ ಕೂಡ ರವಿಕಾಂತ್ ಪರವಾಗಿ ಆದೇಶ ನೀಡಿದೆ. ಬಡ್ಡಿ ಸಮೇತ ಗ್ರಾಹಕನಿಗೆ ಹಣ ವಾಪಸ್ ನೀಡುವಂತೆ ಗ್ರಾಹಕರ ಕೋರ್ಟ್ ಆದೇಶ ನೀಡಿದ್ದರೂ, ಹಣ ವಾಪಸ್ ಕೊಡದೇ ಕಿಯೋ ಕಂಪನಿ ಕಳ್ಳಾಟ ಆಡುತ್ತಿದೆ. ಹೀಗಾಗಿ ಹಣ ವಾಪಸ್ ಕೊಡಿಸುವಂತೆ ಕಾರು ಮಾಲೀಕ ರವಿಕಾಂತ್ ಒತ್ತಾಯಿಸಿದ್ದಾರೆ.