ಹಿಂದೂ ಧರ್ಮದಲ್ಲಿ ವಾರದಲ್ಲಿ 7 ದಿನಗಳಿವೆ ಮತ್ತು ಎಲ್ಲಾ ಏಳು ದಿನಗಳನ್ನು ಒಂದಲ್ಲ ಒಂದು ದೇವರಿಗೆ ಅರ್ಪಿಸಲಾಗುತ್ತೆ. ಈ ಏಳು ದಿನಗಳಲ್ಲಿ ಶನಿವಾರವೂ ಸೇರಿದೆ, ಇದನ್ನು ಶನಿ ದೇವರ ದಿನವೆಂದು ಪರಿಗಣಿಸಲಾಗುತ್ತೆ. ಶನಿ ದೇವರನ್ನು ಶನಿವಾರ ಪೂಜಿಸಲಾಗುತ್ತೆ. ಭಕ್ತರು ಶನಿವಾರ ಶನಿ ದೇವಾಲಯದಲ್ಲಿ ದೀಪ, ಧೂಪ, ಎಣ್ಣೆ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಶನಿ ದೇವರನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತೆ. ಶನಿ ದೇವನು ಒಳ್ಳೆಯದನ್ನು ಒಳ್ಳೆಯದು ಮತ್ತು ಕೆಟ್ಟದ್ದನ್ನು ಕೆಟ್ಟದ್ದರೊಂದಿಗೆ ಪರಿಗಣಿಸುತ್ತಾನೆ ಎಂದು ಹೇಳಲಾಗುತ್ತೆ.
ಎಣ್ಣೆಯನ್ನು ಕೊಳ್ಳಬೇಡಿ: ಜ್ಯೋತಿಷಿಗಳ ಪ್ರಕಾರ ಶನಿವಾರದಂದು ತಪ್ಪಾಗಿಯೂ ಹರಳೆಣ್ಣೆ ಅಥವಾ ಇನ್ನಾವುದೇ ಎಣ್ಣೆಯನ್ನು ಖರೀದಿಸಬೇಡಿ. ಇಂದು ಎಣ್ಣೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ನಂಬಲಾಗಿದೆ. ಅದೇ ಶನಿವಾರದಂದು ಎಣ್ಣೆಯನ್ನು ದಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಬರುತ್ತದೆ. ವಿಶೇಷವಾಗಿ ಸಾಸಿವೆ ಎಣ್ಣೆ, ಅಥವಾ ಎಳ್ಳಿನ ಎಣ್ಣೆಯನ್ನು ದಾನ ಮಾಡುವುದರಿಂದ ಶನೀಶ್ವರನಿಗೆ ಸಂತೋಷವಾಗುತ್ತದೆ.
ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ: ಶನಿವಾರದಂದು ಯಾವುದೇ ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಹಾಗೆ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶನಿಯು ಕಬ್ಬಿಣದ ಆಯುಧವನ್ನು ಧರಿಸುತ್ತಾನೆ ಎಂದು ಪ್ರಾಚೀನ ಗ್ರಂಥಗಳು ಹೇಳುತ್ತವೆ, ಆದ್ದರಿಂದ ಕಬ್ಬಿಣವನ್ನು ಶನೀಶ್ವರನಿಗೆ ಸಂಬಂಧಿಸಿದ ಲೋಹವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶನಿವಾರದಂದು ಕಬ್ಬಿಣ ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ.
ಮನೆಗೆ ಉಪ್ಪು ತರಬೇಡಿ: ಶನಿವಾರದಂದು ಮನೆಗೆ ಉಪ್ಪು ತರಬಾರದು. ಶನಿವಾರದಂದು ಮನೆಗೆ ಉಪ್ಪನ್ನು ತರುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಶನಿವಾರದಂದು ಉಪ್ಪನ್ನು ತಂದರೆ ಮನೆಯಲ್ಲಿ ಸಾಲ ಹೆಚ್ಚಾಗುತ್ತದೆ. ಮನೆಯಲ್ಲಿರುವ ಕುಟುಂಬದ ಸದಸ್ಯರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ.
ಕತ್ತರಿ ಖರೀದಿಸಬಾರದು: ಯಾವುದೇ ಸಂದರ್ಭದಲ್ಲೂ ಶನಿವಾರದಂದು ಕತ್ತರಿ ಖರೀದಿಸಬಾರದು ಎನ್ನುತ್ತಾರೆ ಪಂಡಿತರು. ಇಂದು ಕತ್ತರಿ ಖರೀದಿಸಿದರೆ ಮನೆಯಲ್ಲಿ ಜಗಳವಾಗುತ್ತದೆ ಎಂದು ಹೇಳಲಾಗುತ್ತದೆ. ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಕತ್ತರಿ ಸಂಬಂಧದಲ್ಲಿ ಬಿರುಕು ತರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ನೀವು ಶನಿವಾರ ಕತ್ತರಿ ಖರೀದಿಸಬಾರದು.
ಸಾಸಿವೆ ಎಣ್ಣೆಯನ್ನು ಖರೀದಿಸಬೇಡಿ: ಶನಿವಾರದಂದು ಸಾಸಿವೆ ಎಣ್ಣೆಯನ್ನು ಖರೀದಿಸಬೇಡಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶನಿವಾರದಂದು ಶನಿಗೆ ಎಣ್ಣೆಯನ್ನು ಅರ್ಪಿಸುವುದು ವಾಡಿಕೆ, ಹಾಗಾಗಿ ಈ ದಿನ ಯಾರಿಗಾದರೂ ದಾನ ಮಾಡಿದರೆ ಮಾತ್ರ ಎಣ್ಣೆಯನ್ನು ಖರೀದಿಸಿ. ಶನಿವಾರದಂದು ಖರೀದಿಸಿದ ಸಾಸಿವೆ ಎಣ್ಣೆಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೂಡ ಹೇಳಲಾಗುತ್ತದೆ.