ಸಾಮಾನ್ಯವಾಗಿ ಸೌಂದರ್ಯದ ವಿಚಾರಕ್ಕೆ ಬಂದರೆ ಜನ ಮೊದಲು ನೋಡುವುದು ಮುಖ. ಅದರಲ್ಲೂ ಮಹಿಳೆಯರು ಸುಂದರವಾಗಿ ಕಂಡರೆ ಸಾಕು ಆಕೆ ಗುಣ ಕೂಡ ಒಳ್ಳೆಯದಾಗಿರುತ್ತದೆ ಅಂತ ಸಾಕಷ್ಟು ಮಂದಿ ಬೇಗ ನಿರ್ಧರಿಸಿ ಬಿಡುತ್ತಾರೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಹೆಣ್ಣಿನ ನಿಜವಾದ ಸೌಂದರ್ಯ ಮುಖದಲ್ಲಿ ಅಡಗಿಲ್ಲ ಎಂದು ಹೇಳುತ್ತಾರೆ. ಹಾಗಾದ್ರೆ ಬೇರೆ ಯಾವುದರಲ್ಲಿ ಅಡಗಿದೆ ಎಂದು ನಿಮ್ಮ ಪ್ರಶ್ನೆಯಾದರೆ, ಅದಕ್ಕೆ ಉತ್ತರ ಈ ಕೆಳಗಿನಂತಿದೆ ನೋಡಿ.
King Kohli: ಎಲ್ಲರೂ ಅನಂತ್ ಅಂಬಾನಿ ಮದುವೆಗೋದ್ರೂ, ಆದ್ರೆ ಕೊಹ್ಲಿ ಹೋಗಿದ್ದೆಲ್ಲಿ ಗೊತ್ತಾ!?
ಕೋಗಿಲೆಗಳ ಧ್ವನಿಯೇ ಹೆಣ್ಣಿನ ರೂಪ ಮತ್ತು ಹೆಣ್ಣಿನ ಪರಿಶುದ್ಧತೆ ಜ್ಞಾನವು ಆಕೆಯ ಸೌಂದರ್ಯವಾಗಿದೆ ಮತ್ತು ಕ್ಷಮೆಯು ತಪಸ್ವಿಗಳ ರೂಪವಾಗಿದೆ. ಚಾಣಕ್ಯ ನೀತಿಯಲ್ಲಿ ಈ ಪದ್ಯವು ಮಹಿಳೆಯ ಸೌಂದರ್ಯದ ಬಗ್ಗೆ ಇದೆ
ಕೋಗಿಲೆ ಕಪ್ಪು ಬಣ್ಣದಲ್ಲಿದ್ದರೂ ಅದರ ಧ್ವನಿಯ ಕಾರಣಕ್ಕಾಗಿ ಸುಂದರ ಎಂದು ಕರೆಯಲ್ಪಡುವಂತೆಯೇ, ಓರ್ವ ವ್ಯಕ್ತಿಯ ಸೌಂದರ್ಯವು ಅವರ ಗುಣ ಮತ್ತು ನಡತೆಯಲ್ಲಿ ಇರುತ್ತದೆ. ಯಾರು ಕೌಟುಂಬಿಕ ಮೌಲ್ಯವನ್ನು ಅರಿತಿರುತ್ತಾರೋ, ಯಾರು ಮಾನವೀಯತೆಗೆ ಬೆಲೆ ಕೊಡುತ್ತಾರೋ ಅವರಲ್ಲಿ ನಿಜವಾದ ಸೌಂದರ್ಯ ಮನೆ ಮಾಡಿರುತ್ತದೆ.
ಒಬ್ಬ ವ್ಯಕ್ತಿ ಎಷ್ಟೇ ಸುಂದರವಾಗಿದ್ದರೂ ಅವರು ಶಿಕ್ಷಣವನ್ನು ಪಡೆಯದಿದ್ದರೆ ಉಪಯೋಗವಿಲ್ಲ. ಶಿಕ್ಷಣ ಇಲ್ಲದವರು ಪರಿಮಳವೇ ಇಲ್ಲದ ಹೂವಿನಂತೆ ಎಂದು ಚಾಣಕ್ಯ ಹೇಳುತ್ತಾರೆ. ಅಂದರೆ ಹೂವಿನಲ್ಲಿ ಪರಿಮಳ ಇದ್ದರೆ ಅದು ಅರಳುವುದರೊಳಗೆ ಸುತ್ತಲೂ ಹರಡಿಕೊಂಡು ಬಿಡುತ್ತದೆ. ಆದರೆ, ಪರಿಮಳವೇ ಇಲ್ಲದ ಹೂವು ಎಷ್ಟೇ ಅರಳಿದರೂ ಅದರ ಅಸ್ತಿತ್ವ ಗಮನಕ್ಕೆ ಬರುವುದಿಲ್ಲ. ಹಾಗಾಗಿ ಶಿಕ್ಷಣ ಪಡೆದಿರುವ ಮಹಿಳೆಯರಿಗೆ ಸಮಾಜದಲ್ಲಿ ಗೌರವವೂ ಸಿಗುತ್ತದೆ
ದುಷ್ಟ ವ್ಯಕ್ತಿಗಳಿಂದ ಸದಾ ದೂರವಿರಬೇಕು. ಏಕೆಂದರೆ ಮನಸ್ಸಿನಲ್ಲಿ ದುಷ್ಟತನ ತುಂಬಿಕೊಂಡವರು ವಿಷಜಂತುಗಳಿಗಿಂತಲೂ ಅಪಾಯಕಾರಿ ಎನ್ನುವುದು ಚಾಣಕ್ಯರ ಅಭಿಪ್ರಾಯ. ಯಾವುದೇ ವಿಷಪೂರಿತ ಹಾವು ತನ್ನ ಜೀವಕ್ಕೆ ಅಪಾಯವಿದ್ದಾಗ ಮಾತ್ರ ಕುಟುಕುತ್ತದೆ. ಆದರೆ ದುಷ್ಟ ವ್ಯಕ್ತಿ ಹಾಗಲ್ಲ, ಅವಕಾಶ ಸಿಕ್ಕಾಗಲೆಲ್ಲಾ ಇನ್ನೊಬ್ಬರಿಗೆ ಅಪಾಯವನ್ನುಂಟು ಮಾಡುತ್ತಾರೆ.
ಮಹಿಳೆಯರು ಗಂಡನೊಂದಿಗೆ ಮಾಡಬಾರದ ಕೆಲಸಗಳು: ಅನುಮಾನ: ಅನೇಕ ಮಹಿಳೆಯರು ತಮ್ಮ ಗಂಡನನ್ನು ನಿರಂತರವಾಗಿ ಅನುಮಾನಿಸುತ್ತಲೇ ಇರುತ್ತಾರೆ. ಆದರೆ ಯಾವಾಗಲೂ ಯಾವುದೇ ವಿಚಾರವಾಗಿರಲಿ ಮೊದಲು ಅದರ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು, ಅದು ಸತ್ಯವೋ ಅಥವಾ ಇಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಹೊರತು ಪಡಿಸಿ ಎಲ್ಲ ವಿಚಾರದಲ್ಲಿಯೂ ಗಂಡನನ್ನು ಅನುಮಾನಿಸುವ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಪತಿ ಕೋಪಗೊಳ್ಳುತ್ತಾರೆ ಮತ್ತು ಆತನ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಆತನಿಗೆ ತನ್ನ ಕೆಲಸವನ್ನು ಸರಿಯಾಗಿ ಮತ್ತು ಗಮನದಿಂದ ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಇದು ಅವರನ್ನು ದೊಡ್ಡ ಗಂಭೀರ ಬಿಕ್ಕಟ್ಟಿಗೆ ಸಿಲುಕಿಸಬಹುದು
ಮಹಿಳೆಯರೇ ಆಗಿರಲಿ ಅಥವಾ ಪುರುಷನೇ ಆಗಿರಲಿ ಬೆಳಗ್ಗೆ ಸೂರ್ಯ ಉದಯಿಸಿದ ನಂತರವೂ ತಡವಾಗಿ ಎದ್ದೇಳುವ ಅಭ್ಯಾಸವು ಜೀವನದಲ್ಲಿ ಪ್ರಗತಿಯನ್ನು ತರುವುದಿಲ್ಲ. ಇಬ್ಬರಲ್ಲಿ ಒಬ್ಬರು ಬೆಳಗ್ಗೆ ಹೊತ್ತು ತಡವಾಗಿ ಎದ್ದೇಳುವುದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಮುಂಜಾನೆ ಬೇಗನೆ ಎದ್ದು ಪ್ರಾಪಂಚಿಕ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಮತ್ತು ದಿನದ ಸಮಯವನ್ನು ಇತರ ಚಟುವಟಿಕೆಗಳಿಗೆ ಮೀಸಲಿಡುವವನು ಬೇಗನೆ ಪ್ರಗತಿ ಹೊಂದುತ್ತಾನೆ. ಹಾಗಾಗಿ ಮಹಿಳೆಯರು ತಡವಾಗಿ ಎದ್ದೇಳುವ ಅಭ್ಯಾಸವನ್ನು ತಮ್ಮ ಗಂಡಂದಿರು ಹೊಂದಿದ್ದರೆ ಇದನ್ನು ಮೊದಲು ಬಿಡಿಸಬೇಕು