ತುಂಡಾದ ತಂತಿ ಮತ್ತು ಕಂಬದ ಮೇಲೆ ತೊಳೆದು ಬಟ್ಟೆಯನ್ನು ಹಾಕುವುದು ಮತ್ತು ಪ್ರಾಣಿಗಳನ್ನು ಕಟ್ಟುವುದು ಬೇಡ ಯಾಕೆಂದರೆ ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದು. ಯಾವಾಗಲೂ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಐ ಎಸ್ ಐ ಅಧಿಕೃತ ಗುಣಮಟ್ಟದ ಸಾಮಗ್ರಿಗಳನ್ನ ಉಪಯೋಗಿಸಿ. ಅಪಾಯ ಸಂಭವಿಸುವ ಸಮಯದಲ್ಲಿ ಕೂಡಲೇ ನಿಗಮದ ಅಧಿಕಾರಿಗಳಿಗೆ 1912 ಕರೆ ಮಾಡಿ ತಿಳಿಸಿ.
ತಂತಿ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಹಾಯ್ಸಬಾರದು ಸಾರ್ವಜನಿಕರು ವಿದ್ಯುತ್ ಕಂಬಗಳನ್ನು ಹತ್ತಬಾರದು ಭೂಸಂಪರ್ಕ ವ್ಯವಸ್ಥೆ ಇಲ್ಲದೆ ವಿದ್ಯುತ್ ಉಪಕರಣಗಳನ್ನು ಬಳಸಬಾರದು. ವಿದ್ಯುತ್ ಮಾರ್ಗಗಳ ಕಡೆಗೆ ಬಾಲ್ಕನಿಗಳನ್ನು ಕಿಟಕಿಗಳನ್ನು ನಿರ್ಮಿಸಬಾರದು ಎಂದು ರಬಕವಿ ನಗರದ ಹೆಸ್ಕಾಂ ಅಧಿಕಾರಿ ಬ್ರಹ್ಮಾನಂದ ಮಾಸ್ತಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಹೆಸ್ಕಾಂ ರಬಕವಿ ಉಪವಿಭಾಗ ಹೆಸ್ಕಾಂ ರಬಕವಿ ನಗರ ಶಾಖೆ ವತಿಯಿಂದ ವಿದ್ಯುತ್ ಸುರಕ್ಷತಾ ಜಾಥಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸಿತಲ ಸಂಕಾರ. ವಿನೋದ ಬಾವಲತ್ತಿ. ನಿತಿನ್ ರಾಯನ್ನವರ. ರಿಯಾಜ್ ನದಾಫ. ಕೀರಣ ಮುಂಡಗನೂರ. ಮಲ್ಲಿಕಾರ್ಜುನ ರೆಡ್ಡಿ. ವಿನಾಯಕ ಜಗ್ಗದಾಳ. ಸಾಬು ಬಂಡಿ ಸರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ