ಹುಬ್ಬಳ್ಳಿ: ಜನ ಜಾಗೃತಿ ತಂಡದಲ್ಲಿ ಪ್ರತಾಪ್ ಸಿಂಹ ಕೈ ಬಿಟ್ಟಿಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಒಬ್ಬೊರನ್ನಾ ಕೈ ಬಿಡ್ತಾರೆ ಅಪ್ಪ-ಮಕ್ಕಳು ಇದೇ ದಂಧೆ ಮಾಡುತ್ತಾರೆ. ಈ ತಿಂಗಳ 25 ರಿಂದ ಡಿಸೆಂಬರ್25 ರ ತನಕ ಜನ ಜಾಗೃತಿ ಮಾಡುತ್ತೇವೆ ನಮ್ಮದು ಕ್ಲಿಯರ್ ಇದೆ. ನಮ್ಮನ್ನ ನೋಡಿ ಅವರದ್ದು ಮೂರು ತಂಡ ಮಾಡಿದ್ದಾರೆ ಆದರೆ ಅದಕ್ಕೆ ಡೆಟ್ ಇಲ್ಲ ಏನೂ ಇಲ್ಲ ಅವ್ವ-ಇಲ್ಲ ಅಪ್ಪ ಇಲ್ಲ ಅವರದ್ದು ಒಂದು ಟೀಮ್ ಮಾಡಿದ್ದಾರೆ . ವಕ್ಪ್ ಬೋರ್ಡ್ ಕಾಳಜಿ ಇಲ್ಲ, ಮುಡಾ, ವಾಲ್ಮೀಕಿ ಕಾಳಜಿ ಇಲ್ಲ, ಅವರ ಕಾಳಜಿ ಸಿಎಂ ಹೇಗೆ ಆಗಬೇಕು, ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕು ಅಂತ ಅಷ್ಟೇ ಆಗಿದ್ದು,
ರೇಣುಕಾಚಾರ್ಯ ಹೆಸರು ತೆಗೆದುಕೊಂಡಿದ್ದಕೆ ಯತ್ನಾಳ್ ಗರಂ.
ಅಂತವನ ಹೆಸರು ಯಾಕೆ ತೆಗೆದುಕೊಳ್ತೀರಿ..? ಎಂದ ಅವರು ಒಳ್ಳೆಯ ರಾಜಕಾರಣಿಗಳ ಸಂದರ್ಶನ ಮಾಡಿ ನೋಡಿ ಹಾದಿ, ಬೀದಿ ಹಂದಿ,ಪಂದಿಗಳ ಬಗ್ಗೆ ಯಾಕೆ ಮಾತನಾಡುತ್ತೀರಿ..? ಇಂತಹಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡೋದಿಲ್ಲ ಥರ್ಡ್ ಗ್ರೇಟ್ ರಾಜಕಾರಣಿಗಳ ಬಗ್ಗೆ ಕೇಳಬೇಡಿ ಎಂದರು. ಇನ್ನು ಕುದುರೆ ವ್ಯಾಪಾರದ ಬಗ್ಗೆ ಸಿಎಂ ಆರೋಪ ವಿಚಾರವಾಗಿ ಮಾತನಾಡಿದ ಅವರುಕುದುರೆ ವ್ಯಾಪಾರದ ಬಗ್ಗೆ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಗೆ ಮಾತ್ರ ಗೊತ್ತು. ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಲಿ ಎಂದ ಅವರು,
ಜವಾಬ್ದಾರಿ ಹುದ್ದೆಯಲ್ಲಿ ಇದ್ದವರು ಬೇಕಾಬಿಟ್ಟಿಯಾಗಿ ಮಾತನಾಡಬಾರದು ಏನು ಸಾಕ್ಷಿ ಇದೆಯಾಬಿಜೆಪಿಯಿಂದ ಯಾರು 50 ಕೋಟಿ ಕೋಡ್ತಾರೆಹಾಗಿದ್ರೆ ನಿಮ್ಮ ಗುಪ್ತಚರ ಇಲಾಖೆಯ ಅಧಿಕಾರಗಳು ಏನು ಮಾಡುತ್ತಿದ್ದಾರೆ..? ಅವರೆ ಇದನ್ನು ಮಾಡುತ್ತಿದ್ದಾರೆ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ದೇವ್ರಾಣೆ ಮಾಡಿ ಹೇಳುತ್ತೇವೆ. ಆಪರೇಷನ್ ನಮಗೆ ಅವಶ್ಯಕತೆ ಇಲ್ಲ ಎಂದ ಅವರು, ವಿರೋಧ ಪಕ್ಷದಲ್ಲೇ ಕೂರುತ್ತೇವೆ.
ಐವತ್ತು ಅರವತ್ತು ಜನ ತಂದು ನಾವು ಸರ್ಕಾರ ಮಾಡಿದ್ರೆ ನಾವು ಅವರಪ್ಪನಗಿಂತ ಭ್ರಷ್ಟರಾಗುತ್ತೇವೆ. ನಾವು ಬೇಕಿದ್ದರೆ ಚುನಾವಣೆಗೆ ಹೋಗತ್ತೇವೆ ಎಂದ ಅವರು, ಒಂದು ವೇಳೆ ಬಿಜೆಪಿಯಲ್ಲಿ ಆಪರೇಷನ್ ಮಾಡುತ್ತಿದ್ದರೂ ಅದಕ್ಕೆ ಬೆಂಬಲ ನೀಡೋದಿಲ್ಲ ಇದು ಕ್ಲಿಯರ್ ಆಗಿದೆ. ಜನರ ಮತ್ತು ವಾಲ್ಮೀಕಿ ಹಣ ಲೂಟಿ ಮಾಡಿರುವ ಅಯ್ಯೋಗರ ಜೊತೆಗೆ ನಾವು ಸರ್ಕಾರ ಮಾಡೋದಿಲ್ಲ ಎಂದರು.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹುಡುಗಿಯರು Googleನಲ್ಲಿ ಅತಿ ಹೆಚ್ಚು ಸರ್ಚ್ ಮಾಡೋದೇನು ಗೊತ್ತಾ..?
ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಸಹ ಪ್ರತಿಕ್ರಿಯೆ ಕೊಟ್ಟ ಅವರು ವೈಯಕ್ತಿಕ ಟೀಕೆ ಮಾಡಬಾರದು ಯಾರ ಬಣ್ಣ ಕೆಂಪೋ ಯಾರ ಬಣ್ಣ ಕಪ್ಪೂರಾಜಕೀಯವಾಗಿ ಎದುರಿಸಿ ಧಮ್ ಇದ್ದ್ರೆ ಹೋಗಿ ಜನರ ಮುಂದೆ ಹೇಳು2 ಲಕ್ಷ ಎಕರೆ ಲೂಟಿ ಮಾಡುತ್ತಿರುವೆ ಅಂತ ಹೇಳು ವಕ್ಪ್ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದಾನೆ. ಕರಿ, ಬಳಿ ಮಾತನಾಡೋದ ಸರಿಯಲ್ಲಾ, ವರ್ಣ ಜಾತಿ ನಿಂದನೆ ಮಾಡಬಾರದು ಎಂದು ಸಲಹೆ ನೀಡಿದರು.
ಪಂಚಮಸಾಲಿ ಮತ್ತೆ ಸಭೆ ವಿಚಾರ ಸಿಎಂಸಿದ್ದರಾಮಯ್ಯ ಕರೆದ ಸಭೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ತುಟ್ಟಿ ಪಿಟ್ಟಿಕ್ ಅಂದಿಲ್ಲನಾವು ಪ್ರಾಣ ತ್ಯಾಗ ಮಾಡತ್ತೇವೆ ಅಂತ ಹೇಳಿದ್ದರು ಇದನ್ನು ಯಾವುದು ಮಾಡಿಲ್ಲ ಸಿದ್ದರಾಮಯ್ಯ ಕೊಟ್ಟ ಬಿಸ್ಕೇಟ ತಿಂದು ಸುಮ್ಮನೆ ಆಗಿದ್ದಾರೆ. ಹೀಗಾಗಿ ಇಂದು ಮತ್ತೊಂದು ಸಭೆ ನಡೆಸುತ್ತಿದ್ದೇವೆ ಎಂದರು.