ವಿಜಯಪುರ: ವಕ್ಫ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸ್ವಾಮೀಜಿಗಳು ಕೈಜೋಡಿಸಬೇಕು. ಆದರೆ ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿಲ್ಲ. ವಕ್ಫ್ ವಿರುದ್ಧ ದೊಡ್ಡ ಹೋರಾಟ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಕನ್ಹೇರಿ ಸ್ವಾಮಿಜಿ ಮುಂಚೂಣಿ ವಹಿಸಿಕೊಂಡಿದ್ದರೆ,
Dolo 650: ಸಣ್ಣ-ಪುಟ್ಟ ರೋಗಕ್ಕೆಲ್ಲಾ “ಡೋಲೋ 650” ಮಾತ್ರೆ ನುಂಗುವ ಮುನ್ನ ಎಚ್ಚರ! ಈ ಸ್ಟೋರಿ ನೋಡಿ
ಇತರೆ ಸ್ವಾಮೀಜಿಗಳು ಕೊಂಕು ಹೇಳುತ್ತಿದ್ದಾರೆ. ಮಠಗಳಿಗೆ ದಾನ ನೀಡುವವರು ಹಿಂದೂಗಳು, ಮುಸ್ಲಿಂರಲ್ಲ. ಮುಸ್ಲಿಂರೆಲ್ಲ ಸ್ವಾಮೀಜಿಗಳಿಗೆ ನಮಸ್ಕಾರ ಮಾಡಲ್ಲ ಎಂದರು. ಕೇಂದ್ರ ಸಚಿವೆ ಕರಂದ್ಲಾಜೆ, ನಾನು ಇತರರು ಸೇರಿ ಅಹೋರಾತ್ರಿ ಹೋರಾಟ ಮಾಡುತ್ತೇವೆ. ವಕ್ಫ್ ಹೋಗುವವರೆಗೂ ಹೋರಾಟ ನಿಲ್ಲಲ್ಲ, ಇದು ಕೂಡ ಚರ್ಚೆಗೆ ಗ್ರಾಸವಾಗಲಿದೆ. ಮುಂದೆ ರಾಜ್ಯದಲ್ಲಿ ನಮ್ಮದೇ ಕಾಂಬಿನೇಷನ್ ನಾಯಕತ್ವ ಎಂದರು.