ವಾಷಿಂಗ್ಟನ್ : ಯೆಮನ್ನ ಹೌದಿ ಗುಂಪನ್ನು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ನಿಯೋಜಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಈ ಕ್ರಮವು ಕೆಂಪು ಸಮುದ್ರದಲ್ಲಿ ವಾಣಿಜ್ಯ ನೌಕೆಗಳ ಮೇಲೆ ಹಾಗೂ ನಿರ್ಣಾಯಕ ಕಡಲ ಮಾರ್ಗವನ್ನು ರಕ್ಷಿಸುವ ಅಮೆರಿಕದ ಸಮರನೌಕೆಗಳ ಮೇಲಿನ ದಾಳಿಗಾಗಿ ಹೌದಿ ಸಂಘಟನೆಗೆ ಕಠಿಣ ಆರ್ಥಿಕ ದಿಗ್ಬಂಧನವನ್ನು ವಿಧಿಸಲಿದೆ.
2021ರಲ್ಲಿ ಟ್ರಂಪ್ ಅವರ ನಿರ್ಗಮನದ ನಂತರ, ಆಗಿನ ಅಧ್ಯಕ್ಷ ಜೋ ಬಿಡೆನ್ ಅವರು ತಮ್ಮ ಕೊನೆಯ ಅವಧಿಯ ಮುಕ್ತಾಯದ ಸಮೀಪದಲ್ಲಿ ಟ್ರಂಪ್ ಜಾರಿಗೆ ತಂದ ಪದನಾಮವನ್ನು ರದ್ದುಗೊಳಿಸಿದರು.